ಕತೆ: ಸೇನಾನಿ
"ಎಲ್ಲರ ಜೀವನದಲ್ಲೂ ಕೆಲವು ಏರುಪೇರುಗಳಾಗುತ್ತವೆ. ನೀವೇನು ತಿಳಿಯದವರಲ್ಲ. ಕೊನೆತನಕ ಹೋರಾಡುತ್ತೇನೆ ಎನ್ನುವವ ಮಾತ್ರ ಸೈನಿಕ. ನಾನು ಗೆಲ್ಲತ್ತೇನೆ ಎನ್ನುವುದು ಬಿಟ್ಟು ಬೇರೇನನ್ನೂ ಚಿಂತಿಸದೆ ಇರುವುದಕ್ಕೆ ಆತನಿಗೆ ಮಾತ್ರ ಸಾಧ್ಯ. ನೀವು ಗೆಲ್ಲುತ್ತೀರಿ. "
ಹೋರಾಟವಾದರೂ ಯಾರೊಡನೆ? ಸೇನಾನಿ ಗುರು ಸಾರ್ ಗೆಲ್ಲುತ್ತಾರಾ? ಗೆದ್ದರಾ?
ಮಾನವೀಯ ಸಂಬಂಧಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ನವಿರಾಗಿ ಕತೆ ಹೆಣೆದಿದ್ದಾರೆ ಗೋಪೀನಾಥ ರಾವ್.ಮುಂದೆ ಓದಿ.
ಬಾವುಟ
ಕನ್ನಡದಲ್ಲಿ ಬಾವುಟ ಅಂದರೆ ಧ್ವಜ, ಸಂಕೇತ, ಗುರುತು ಅನ್ನುವುದು ಸಾಮಾನ್ಯ ಅರ್ಥ. ಸರಿಯೋ ತಪ್ಪೋ, ನನಗೆ ತಿಳಿದಂತೆ, ಅದು ಹೀಗೆ ಅಂತ ಅನಿಸುತ್ತದೆ
ಕನ್ನಡ ರಾಯಭಾರಿ - ಪ್ರಕಾಶ ಭಂಡಾರಿ
ಹೊರನಾಡಿನಲ್ಲಿರುವ ಕನ್ನಡ ಮಕ್ಕಳಿಗೆ ಕನ್ನಡವನ್ನು ಕಲಿಸುತ್ತ, ಕನ್ನಡ ಸಂಸ್ಕೃತಿಯ ಪರಿಸರವನ್ನು ಕಲ್ಪಿಸುವ ಉದ್ದೇಶದಿಂದ ವರ್ಷ ೨೦೦೦ ದಲ್ಲಿ ಕ್ಯಾಲಿಫೋರ್ನಿಯದ ಅವೈನ್ ನಗರದಲ್ಲಿ ಕನ್ನಡ ಕಲಿ ಸಂಸ್ಥೆ ಮತ್ತು ಶಾಲೆಗಳು ಪ್ರಾರಂಭವಾದವು. ನಂತರ, ಇದರಿಂದ ಪ್ರೇರಿತವಾಗಿ ಅಮೇರಿಕದ ತುಂಬ ಮತ್ತು ಇತರೆಡೆ 'ಕನ್ನಡ ಕಲಿ' ಶಾಲೆ ಮತ್ತು ಕಾರ್ಯಕ್ರಮಗಳು ಹುಟ್ಟಿಕೊಂಡವು. ಇದು ನಿಮಗೆ ಗೊತ್ತಿರುವ ವಿಷಯ.
ಸ್ವತಂತ್ರವಾಗಿ, ಇಂತಹದೆ ಕಳಕಳಿಯಿಂದ, ಮುಂಬಯಿ ನಗರದಲ್ಲಿ, 'ಚಿಣ್ಣರ ಬಿಂಬ' ಸಂಸ್ಥೆಯನ್ನು ಹುಟ್ಟು ಹಾಕಿ, ಕನ್ನಡ ಮತ್ತು ಕನ್ನಡ ಸಂಸ್ಕೃತಿಗಾಗಿ ಮೌನವಾಗಿ ದುಡಿಯುತ್ತ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ ಪ್ರಕಾಶ ಭಂಡಾರಿ. ಇವರ ಕಾರ್ಯ ವೈಖರಿ ಮತ್ತು ಸಾಧನೆಗಳು ಹೊರನಾಡಿನಲ್ಲಿ ಕನ್ನಡಕ್ಕಾಗಿ ದುಡಿಯುತ್ತಿರುವ ನಮ್ಮೆಲ್ಲರಿಗೂ ಆದರ್ಶಪ್ರಾಯ. ಕನ್ನಡ ಕಲಿಗಳೆ, ಇವರನ್ನು ನಾವು ಅಭಿನಂದಿಸುವುದಷ್ಟೇ ಅಲ್ಲ, ಅನುಕರಿಸುವುದೂ ಅಗತ್ಯ.
ಬದುಕು - ಬಾಳು
ಬದುಕು ಮತ್ತು ಬಾಳು, ಈ ಪದಗಳು ಸಮಾನಾರ್ಥಕವೇ? ಇಲ್ಲವಾದರೆ ಏನು ವ್ಯತ್ಯಾಸ? ಜೀವಿಸುವುದು ಹೇಗೆ? ದೀರ್ಘ ಆಯುಷ್ಯದ ಗುಟ್ಟು ಏನು? ಬನ್ನಿ ಕೆದಕಿ ನೋಡೋಣ.
ಅವನತಿಯತ್ತ ಭಾವನಾತ್ಮಕ ಸಂಬಂಧ : ಯಾಂತ್ರಿಕವಾಗುತ್ತಿರುವ ದೀಪಾವಳಿ ಆಚರಣೆ
ಕರ್ನಾಟಕ ಲಾಂಛನ ಕನ್ನಡ ಲಾಂಛನ ಆಗಲಿ
ಕನ್ನಡ ಕಲಿಯ ಸವಿನಯ ಮನವಿ, A Petition by Kannada Kali
ಲಾಂಛನದಲ್ಲಿ ಭಾಷೆ, ಲಿಪಿ, ಮೂಲ, ವಾಚ್ಯಾರ್ಥ, ಸೂಚ್ಯಾರ್ಥ ಎಲ್ಲವೂ ಕನ್ನಡ ಆಗಿರಬೇಕು, ಕನ್ನಡ ನಾಡು ನುಡಿ ಸಂಸ್ಕೃತಿಗಳಿಗೆ ಸಂಬಂಧಿಸಿರಬೇಕು. ಕರ್ನಾಟಕ ಲಾಂಛನ ಕನ್ನಡ ಲಾಂಛನ ಆಗಬೇಕು ಎನ್ನುವುದೇ ಕನ್ನಡ ಕಲಿಯ ಒತ್ತಾಸೆ.
ನಾಡ ಹಬ್ಬ
ರಾಜ್ಯೋತ್ಸವ, ದೀಪಾವಳಿ, ದಸರೆ ಎಲ್ಲರಿಗೂ ಗೊತ್ತು. ನಾಡ ಹಬ್ಬ ಎಲ್ಲಿಂದ ಬಂತು?
ಕನ್ನಡದ ಶ್ರೀಮಂತಿಕೆ ಎಲ್ಲಿದೆ ಮತ್ತು ಅಭಿವೃದ್ಧಿ ಹೇಗೆ?
"ವಾಗ್ದೇವಿಯ ಭಂಡಾರದ ಮುದ್ರೆಯನೊಡೆದಂ" ಎಂದು ಮಹಾಕವಿ ರನ್ನ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದಾನೆ. ರನ್ನ ಅಷ್ಟೇ ಅಲ್ಲ, ಕವಿರಾಜಮಾರ್ಗದ ಶ್ರೀವಿಜಯನಿಂದ ಕುಮಾರವ್ಯಾಸನ ವರೆಗೂ ಎಲ್ಲ ಕವಿಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಇದೇ ಪರಂಪರೆ ನವೋದಯ, ನವ್ಯ ಸಾಹಿತ್ಯದಲ್ಲೂ ನಡೆದು ಈಗಲೂ ಮುಂದುವರೆಯುತ್ತಲಿದೆ.