Lessons

ಕ್ಲಿಕ್ ಕ್ಲಿಕ್ ಗಣಕಪ್ಪ - ಕನ್ನಡ ಪದ್ಯ ಪಾಠ

ಕನ್ನಡ ಪದ್ಯ ಪಾಠ

ಕ್ಲಿಕ್‌ ಕ್ಲಿಕ್‌ ಗಣಕಪ್ಪ

ಇನ್ನೇನು ಬೇಸಿಗೆ ರಜೆ ಮುಗಿಯುತ್ತ ಬಂತು. ಶಾಲೆಯ ಹೊಸ ವರ್ಷ ಆರಂಭ. ಎಲ್ಲರಿಗೂ ಹಿಗ್ಗೋ ಹಿಗ್ಗು! ಮತ್ತೆ ಮೆಚ್ಚಿನ ಟೀಚರರ ಪಾಠ, ಹಳೆ ಗೆಳೆಯರ ಜೊತೆ ಆಟ; ಹೊಸ ಗೆಳೆಯರು, ಹೊಸ ಪುಸ್ತಕಗಳು, ಹೊಸ ಬಟ್ಟೆಗಳು ಎಲ್ಲಕ್ಕೂ ಹೊಸ ಹುರುಪು. ಈಗಂತೂ, ಹೊಸ ತರಗತಿಗೆ, ಹೊಸ ಗಣಕವನ್ನು ಕೊಳ್ಳುವುದು‌ ಸಾಮಾನ್ಯ ಆಗಿದೆ. ಗಣಕ ಅಂದರೆ ಕಂಪ್ಯೂಟರು, ಲ್ಯಾಪ್‌ ಟಾಪು, ಅಥವ ಟ್ಯಾಬ್ಲೆಟ್ಟು; ಎಷ್ಟೋ ಅಪ್‌ ಗಳನ್ನು ಅಳವಡಿಸಿಕೊಳ್ಳಬಹುದಾದ ಮೊಬೈಲ್‌ ಫೋನು ಕೂಡ ಆಗಬಹುದು. ಹೀಗೆ ಒಂದು ಗಣಕವನ್ನು ನಮ್ಮ ಪುಟ್ಟುವಿಗೆ ಅಪ್ಪ ಅಮ್ಮ ಕೊಡಿಸಿದಾಗ ಏನಾಯ್ತು? ಅವನು ಕಲಿತ ಪಾಠ ಏನು?