ಜಾಗತಿಕ ಹಳ್ಳಿ ಹಬ್ಬ

Global Village Festival

ಜಾಗತಿಕ ಹಳ್ಳಿ ಹಬ್ಬ ೨೦೦೮ - ಭಾರತ ವೈಭವ

ಅರ್ವೈನ್ ಜಾಗತಿಕ ಹಳ್ಳಿ ಹಬ್ಬದಲ್ಲಿ ಭಾರತ ವೈಭವ


ಶನಿವಾರ ಅಕ್ಟೊಬರ ೪, ೨೦೦೮

ಬಿಲ್ ಬಾರ್ಬರ್ ಉದ್ಯಾನ, ಅರ್ವೈನ್, ಕ್ಯಲಿಫೊರ್ನಿಯ 

೧೧:೩೦ಕ್ಕೆ ಅರ್ವೈನ್ ನಗರಸಭೆಯ ಮುಂದಿರುವ ಪಾರ್ಕಿನಲ್ಲಿ ಅರ್ವನಿನ ಜಾಗತಿಕ ಹಳ್ಳಿ ಹಬ್ಬ, ವಿವಿಧ ಸಂಸ್ಕೃತಿಗಳ ಸಂಗಮ http://www.cityofirvine.org/globalvillage.

ಜಾಗತಿಕ ಹಳ್ಳಿ ಹಬ್ಬ

ತಾಂತ್ರಿಕ, ಆರ್ಥಿಕ, ಮಾಹಿತಿ ಕ್ಷೇತ್ರಗಳ ಅಗಾಧ ಪ್ರಗತಿಯಿಂದ ಜಗತ್ತೆ ಒಂದು ಹಳ್ಳಿ ಆದರೆ, ಜನರೆಲ್ಲ ಕಲೆತು ಪ್ರತಿ ಹಳ್ಳಿಯೂ ಜಗತ್ತಿನ ಪ್ರತೀಕ ಆಗುತ್ತಿದೆ. ಕರಗಿಸುವ ಕಡಾಯಿ ಎಂದು ಹೆಸರಾದ ವಲಸೆ ಬಂದವರ ದೇಶ ಅಮೆರಿಕದಲ್ಲಿ ಈ ಮಾತು ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಈ ವೈವಿಧ್ಯವನ್ನು ಕೊಂಡಾಡುವುದೆ ಅರ್ವೈನ್ ಜಾಗತಿಕ ಹಳ್ಳಿ ಜಾತ್ರೆಯ ಉದ್ದೇಶ.