ಕನ್ನಡ ಕಲಿಯ ಮೊದಲ ಅಧ್ಯಾಯ ( ಕನ್ನಡ ಕಲಿ ಶಾಲೆ ) ಸಪ್ಟಂಬರ‌ 24, 2000ರಂದು ಕ್ಯಲಿಫೋರ್ನಿಯದ ಅರ್ವೈನ್ ನಗರದಲ್ಲಿ ಪ್ರಾರಂಭವಾಯಿತು. ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡಿಗರಲ್ಲಿ ಹುದುಗಿದ ಆಸೆಗೆ ಅದು ಜೀವ ತುಂಬಿತು. ಕೆಲವೇ ತಿಂಗಳಲ್ಲಿ ಇನ್ನೂ ನಾಲ್ಕು ಅಧ್ಯಾಯಗಳು ಈ ತೆಂಕಣ ಪ್ರದೇಶದ ವಿಸ್ತಾರದಲ್ಲಿ ಹುಟ್ಟಿಕೊಂಡವು. ವಾರಾಂತ್ಯದಲ್ಲಿ ನಿಯತವಾಗಿ ಸೇರುತ್ತ ಸಾಮಾನ್ಯ ಪಠ್ಯಕ್ರಮವನ್ನು ರೂಪಿಸಿಕೊಂಡವು. ಮಕ್ಕಳು ಕನ್ನಡ ಕಲಿಯುವುದರ ಜೊತೆ, ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿಇಲ್ಲಿನ ಜನರಿಗೆ ಕನ್ನಡ ಸಂಸ್ಕೃತಿಯನ್ನು ಪರಿಚಯಿಸುವಲ್ಲಿ ಕೂಡ ಸಮರ್ಥರಾಗಿದ್ದಾರೆ.

ನಿಮ್ಮ ಮಕ್ಕಳು ಕನ್ನಡ ಮಾತನಾಡಬೇಕೆ? ನೀವು ಕನ್ನಡ ಕಲಿಸಬಯಸುತ್ತಿರಾ? ಹೊರದೇಶದಲ್ಲಿ ಕನ್ನಡ ಕಲಿಸಲು ನಿಮ್ಮಲ್ಲಿ ಉತ್ತಮ ಯೋಜನೆಗಳು ಇವೆಯೆ?
ನಿಮ್ಮ ಊರಿನಲ್ಲೂ ಒಂದು ಕನ್ನಡ ಕಲಿ ಶಾಲೆಯನ್ನು ಏಕೆ ಪ್ರಾರಂಭಿಸಬಾರದು!
ಕೂಡಲೆ ಒಂದು ಈ-ಮೇಲ್ ರವಾನಿಸಿ: kannadakali at yahoo.com

ಕನ್ನಡ ಕ‌ಲಿಯ ಉಗಮ, ಉದ್ದೇಶ, ಬೆಳವಣಿಗೆ, ನಡೆದು ಬಂದ ಹಾದಿಯ ಬಗ್ಗೆ ತಿಳಿದುಕೊಳ್ಳಲು ಇತರೆಡೆ ಪ್ರಕಟಿತವಾದ ಲೇಖನಗಳನ್ನು ಇಲ್ಲಿ ಕಡತದಲ್ಲಿ ಹಿಡಿದಿಡಲಾಗಿದೆ.