ಕನ್ನಡ ಕಲಿ ಪಠ್ಯಕ್ರಮದ ಸ್ಥೂಲ ರೂಪ ಮತ್ತು ಸಾಧನೆಯ ಹಂತಗಳು
ಕನ್ನಡ ಕಲಿಯಲು ನಾಲ್ಕು ದಳಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಕಲಿ ಅರಳಿ ಹೂವಾಗಬೇಕಾದರೆ ಎಲ್ಲ ದಳಗಳನ್ನು ಸಾಧಿಸುವುದು ಅಗತ್ಯ.
ಕನ್ನಡ ಕಲಿಯಲು ನಾಲ್ಕು ದಳಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಕಲಿ ಅರಳಿ ಹೂವಾಗಬೇಕಾದರೆ ಎಲ್ಲ ದಳಗಳನ್ನು ಸಾಧಿಸುವುದು ಅಗತ್ಯ.
ಕನ್ನಡ ಪದ್ಯ ಪಾಠ
ಇನ್ನೇನು ಬೇಸಿಗೆ ರಜೆ ಮುಗಿಯುತ್ತ ಬಂತು. ಶಾಲೆಯ ಹೊಸ ವರ್ಷ ಆರಂಭ. ಎಲ್ಲರಿಗೂ ಹಿಗ್ಗೋ ಹಿಗ್ಗು! ಮತ್ತೆ ಮೆಚ್ಚಿನ ಟೀಚರರ ಪಾಠ, ಹಳೆ ಗೆಳೆಯರ ಜೊತೆ ಆಟ; ಹೊಸ ಗೆಳೆಯರು, ಹೊಸ ಪುಸ್ತಕಗಳು, ಹೊಸ ಬಟ್ಟೆಗಳು ಎಲ್ಲಕ್ಕೂ ಹೊಸ ಹುರುಪು. ಈಗಂತೂ, ಹೊಸ ತರಗತಿಗೆ, ಹೊಸ ಗಣಕವನ್ನು ಕೊಳ್ಳುವುದು ಸಾಮಾನ್ಯ ಆಗಿದೆ. ಗಣಕ ಅಂದರೆ ಕಂಪ್ಯೂಟರು, ಲ್ಯಾಪ್ ಟಾಪು, ಅಥವ ಟ್ಯಾಬ್ಲೆಟ್ಟು; ಎಷ್ಟೋ ಅಪ್ ಗಳನ್ನು ಅಳವಡಿಸಿಕೊಳ್ಳಬಹುದಾದ ಮೊಬೈಲ್ ಫೋನು ಕೂಡ ಆಗಬಹುದು. ಹೀಗೆ ಒಂದು ಗಣಕವನ್ನು ನಮ್ಮ ಪುಟ್ಟುವಿಗೆ ಅಪ್ಪ ಅಮ್ಮ ಕೊಡಿಸಿದಾಗ ಏನಾಯ್ತು? ಅವನು ಕಲಿತ ಪಾಠ ಏನು?
ಕನ್ನಡ ಕಲಿ ಶಾಲೆ ಪ್ರಾರಂಭಿಸುವುದು ಮತ್ತು ಮುಂದುವರೆಸುವುದು
ಕಲಿಕೆಯ ಕ್ರಮ ಸರಳ, ಸುಲಭವಾಗಿರಲಿ; ಸೂತ್ರಿತವಾಗಿ ಕಠೋರವಾಗಿ ಇರದಿರಲಿ; ವಿದ್ಯಾರ್ಥಿಗಳ ಪರಿಸರಕ್ಕೆ ಹೊಂದಿಕೊಳ್ಳುವಂತಿರಲಿ. ಗುರಿ ಸಾಧನೀಯವಾಗಿರಲಿ.
ಅ. ಕಾರ್ಯ ವ್ಯವಸ್ಥೆ (Logistics)
ಪ್ರಶ್ನೆ: ನಿಮ್ಮ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಮತ್ತು ಕನ್ನಡ ಕಲಿಯಲ್ಲಿ ನಿಮ್ಮ ಪಾತ್ರವನ್ನು ವಿವರಿಸಿ.
ನಮ್ರತಾ: ನಾನೆ ಕನ್ನಡ ಕಲಿತಿಲ್ಲದ್ದರಿಂದ ಕನ್ನಡ ಕಲಿಸುವುದು ನನಗೆ ಆಗದು.; ಆದರೆ ಕನ್ನಡ ಕಲಿ ಉಳಿದೆಲ್ಲ ಕಾರ್ಯಕ್ರಮಗಳಲ್ಲು ಭಾಗವಹಿಸುತ್ತ ನೆರವಾಗುತ್ತೇನೆ. ಈಗ, ನಾಲ್ಕು ವರುಷಗಳಿಂದ ಹಾಡು ಸಂಗೀತಗಳ ಮೂಲಕ ನಿಯತವಾಗಿ ಕನ್ನಡ ಕಲಿಸುತ್ತಿದ್ದೇನೆ.
ಕರೋನ ಮಾರಿ ಬಡಿದಂದಿನಿಂದ ನಮ್ಮ ಮನೆಯಲ್ಲಿ ನಾವೇ ಬಂಧಿಗಳಾದೆವು. ಆದರೆ ನಮ್ಮ ಕನ್ನಡ ಪ್ರೇಮ ಕುಂದಲಿಲ್ಲ. ಕನ್ನಡ ಕಲಿಕೆ ನಿಲ್ಲಲಿಲ್ಲ. ಈಗ, ಕನ್ನಡ ಕಲಿಯಲು ನಾಲ್ಕು ಗೋಡೆಗಳ ನಡುವೆಯೆ ಕಲಿಯ ಬೇಕೆ ಅನ್ನುವ ಪ್ರಶ್ನೆಗೆ ಉತ್ತರಿಸಬೇಕಾಗಿದೆ.
ದಕ್ಷಿಣ ಕ್ಯಲಿಫೋರ್ನಿಯದ ಅವೈನ್ ನಗರದಲ್ಲಿ ಮೊದಲ ಕನ್ನಡ ಶಾಲೆ ರವಿವಾರ ಸಪ್ಟಂಬರ್ ೨೪, ೨೦೦೦ ರಂದು ಪ್ರಾರಂಭವಾಯ್ತು. ಕೂಡಲೆ, ಸ್ಯಾನ್ ಫ಼ರ್ನಾಂಡೊ ವ್ಯಾಲಿ, ಸರಿತೊಸ್, ಡೈಮಂಡ್ ಬಾರ್, ಆರ್ಕೇಡಿಯಗಳಲ್ಲಿ ಕನ್ನಡ ಶಾಲೆಗಳು ಸ್ಥಳೀಯ ಮಕ್ಕಳಿಗೆ ಕನ್ನಡ ಕಲಿಸಲಾರಂಭಿಸಿದವು. ಕಳೆದ ೧೫ ವರ್ಷಗಳಲ್ಲಿ ಕನ್ನಡ ಕಲಿತು ಕಾಲೇಜುಗಳಿಗೆ ತೆರಳಿದ್ದಾರೆ. ಈಗ, ಮೂರು ಶಾಲೆಗಳು ಅನೇಕ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಡೆಸುತ್ತ ಕನ್ನಡ ಕಲಿ ಕ್ರಿಯಾಕೇಂದ್ರಗಳಾಗಿ ಕನ್ನಡ ಕಂಪನ್ನು ಪಸರಿಸುತ್ತಿವೆ.
ಕನ್ನಡ ಕಲಿ ಕ್ರಿಯಾಕೇಂದ್ರಗಳು:
ಬಹುತೇಕ ಎಲ್ಲಾ ಮಕ್ಕಳಿಗೂ ಅವರ ಮಾತೃ ಭಾಷೆ ಅರ್ಥವಾಗುತ್ತಾದ್ರೂ ಮಕ್ಕಳ ಉತ್ತರ ಮಾತ್ರ ಇಂಗ್ಲೀಷ್ ನಲ್ಲೆ. ಇದಕ್ಕೆ ಕಾರಣ ಅವರ ವಯಸ್ಸಿನ ಮಕ್ಕಳೂ ಅದೇ ಭಾಷೆ ಮಾತನಾಡದಿರುವುದೇ?
ರೂಪಶ್ರೀ ಅವರ ಕನ್ನಡ ಕಲಿಕೆಯ ಬೆಳವಣಿಗೆಯನ್ನು puttiprapancha.blogspot.com ಪುಟ್ಟಿ ಪ್ರಪಂಚದಲ್ಲಿ ಕಾಣಬಹುದು