ಕನ್ನಡದ ಶ್ರೀಮಂತಿಕೆ ಎಲ್ಲಿದೆ ಮತ್ತು ಅಭಿವೃದ್ಧಿ ಹೇಗೆ?
"ವಾಗ್ದೇವಿಯ ಭಂಡಾರದ ಮುದ್ರೆಯನೊಡೆದಂ" ಎಂದು ಮಹಾಕವಿ ರನ್ನ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದಾನೆ. ರನ್ನ ಅಷ್ಟೇ ಅಲ್ಲ, ಕವಿರಾಜಮಾರ್ಗದ ಶ್ರೀವಿಜಯನಿಂದ ಕುಮಾರವ್ಯಾಸನ ವರೆಗೂ ಎಲ್ಲ ಕವಿಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಇದೇ ಪರಂಪರೆ ನವೋದಯ, ನವ್ಯ ಸಾಹಿತ್ಯದಲ್ಲೂ ನಡೆದು ಈಗಲೂ ಮುಂದುವರೆಯುತ್ತಲಿದೆ.