ಕತೆ

Story

ಕತೆ: ಸೇನಾನಿ

"ಎಲ್ಲರ ಜೀವನದಲ್ಲೂ ಕೆಲವು ಏರುಪೇರುಗಳಾಗುತ್ತವೆ. ನೀವೇನು ತಿಳಿಯದವರಲ್ಲ. ಕೊನೆತನಕ ಹೋರಾಡುತ್ತೇನೆ ಎನ್ನುವವ ಮಾತ್ರ ಸೈನಿಕ. ನಾನು ಗೆಲ್ಲತ್ತೇನೆ ಎನ್ನುವುದು ಬಿಟ್ಟು ಬೇರೇನನ್ನೂ ಚಿಂತಿಸದೆ ಇರುವುದಕ್ಕೆ ಆತನಿಗೆ ಮಾತ್ರ ಸಾಧ್ಯ. ನೀವು ಗೆಲ್ಲುತ್ತೀರಿ. "

ಹೋರಾಟವಾದರೂ ಯಾರೊಡನೆ? ಸೇನಾನಿ ಗುರು ಸಾರ್ ಗೆಲ್ಲುತ್ತಾರಾ? ಗೆದ್ದರಾ?
ಮಾನವೀಯ ಸಂಬಂಧಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ನವಿರಾಗಿ ಕತೆ ಹೆಣೆದಿದ್ದಾರೆ ಗೋಪೀನಾಥ ರಾವ್.ಮುಂದೆ ಓದಿ.

ಕಲಸುಮೇಲೋಗರ

ಸ್ಕೂಲು, ಕಾಲೇಜುಗಳಲ್ಲಿ ಕರೋನ ಆವಾಂತರದಿಂದಾಗಿ ಉಪಾಧ್ಯಾಯರುಗಳು ಪಾಠಪ್ರವಚನಗಳನ್ನು ಫ಼ೋನ್ ಮೂಲಕ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ. ಮೇಡಂ ಫ಼ೋನ್‌ನಲ್ಲಿ ದೆಹಲೀ ಮೆ ಕುತುಬ್‌ಮಿನಾರ್ ಹೈ ಎಂದು ಹೇಳಿದಳಂತೆ. ಹುಡುಗ ಬರೆದನಂತೆ ...

[ಹೀಗೆ ಜೀವನದಲ್ಲಿನ ಪ್ರಸಂಗಗಳನ್ನು, ಎಡವಟ್ಟುಗಳನ್ನು ನೆನಪಿಸಿಕೊಂಡರೆ  ಕೃಷ್ಣಮೂರ್ತಿಗಳಿಗೆ ಕಾಣುವುದು ಎಳೆನೀರಿನಂಥ ತಿಳಿ ಹಾಸ್ಯ! ಅಷ್ಟೇ ತೃಪ್ತಿ! ]

 

ಕಾಲಾಯ ತಸ್ಮೈ ನಮಃ!

ಕಣ್ಣಿಗೆ ಕಾಣದೆ, ಎಲ್ಲರ ಆಸೆ ಕನಸುಗಳನ್ನು ಒತ್ತಿಕ್ಕಿ, ವಿಕಟ ವಿಜಯದಿಂದ ಮೆರೆಯುತ್ತಿರುವ ಕೊರೊನ ಮಹಾಮಾರಿ ಕಾಲವನ್ನೆ ಹಿಡಿದು ನಿಲ್ಲಿಸಿದಂತೆ ತೋರುತ್ತಿದೆ. ಆ ದಿನ ಮಗಳಿಗೆ ಪ್ರಾಮಿಸ್ ಮಾಡಿದ ಪೂಜಾ ಈಗಲೂ ಯೋಚಿಸುತ್ತಲೇ ಇದ್ದಾಳೆ. ಯಾವುದು ಸರಿ? ಯಾವುದು ತಪ್ಪು?