ಕನ್ನಡ ಕಲಿ ದಿನ ೨೦೧೯
ಕನ್ನಡ ಕಲಿ ದಿನ ೨೦೧೯
ಮಾರ್ಚ್ ೧೩, ೨೦೧೯
ಜೈನ ಕೇಂದ್ರ, ದಕ್ಷಿಣ ಕ್ಯಲಿಫೋರ್ನಿಯ
ಕನ್ನಡ ಕಲಿ ದಿನ ೨೦೧೯
ಮಾರ್ಚ್ ೧೩, ೨೦೧೯
ಜೈನ ಕೇಂದ್ರ, ದಕ್ಷಿಣ ಕ್ಯಲಿಫೋರ್ನಿಯ
ಕನ್ನಡ ಕಲಿ ಒಂದು ಅವಿರತ ಅಪೂರ್ವ ಸಂಗತಿ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೈಬೆರಳಿನಲ್ಲಿ ಎಣಿಸುವಷ್ಟು ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯ್ತು. ಕೂಡಲೆ , ೮೦ಕ್ಕೂ ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಕನ್ನಡ ಕಲಿಯ ಐದು ಅಧ್ಯಾಯಗಳು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹರಡಿಕೊಂಡವು. ಈಗ ನಾವು ೨೨೦+ ಸದೃಢರಾಗಿದ್ದೇವೆ ಮತ್ತು ಇನ್ನು ಬೆಳೆಯುತ್ತಿದ್ದೇವೆ. ಕಳೆದ ವರ್ಷವೆ ಹೊಸ ಕನ್ನಡ ಕಲಿ ಶಾಲೆಯೊಂದು ಟಾರೆನ್ಸ್ ನಲ್ಲಿ ಪ್ರಾರಂಭವಾಯ್ತು.
ಕನ್ನಡ ಕಲಿ ದಿನ ೨೦೧೧
ಕಳೆದ ವರ್ಷ ತಾನೆ ತನ್ನ ಹತ್ತು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಸಂಬ್ರಮಿಸಿದ ಕನ್ನಡ ಕಲಿ, ಮತ್ತೆ ವಾಷಿಕೋತ್ಸವಕ್ಕೆ ಸಿದ್ಧವಾಗಿದೆ. ಕನ್ನಡ ಕಲಿ ಮಕ್ಕಳೆಲ್ಲ ಒಂದೆಡೆ ನೆರೆದು ಕನ್ನಡಕ್ಕೆ ವಸಂತದ ಆಗಮನವನ್ನು ಬೀರುತ್ತಿದ್ದಾರೆ. ದಕ್ಷಿಣ ಕ್ಯಲಿಫೊರ್ನಿಯದ ಎಲ್ಲ ಕನ್ನಡ ಕಲಿ ಅಧ್ಯಾಯಗಳು ಸೇರಿ ಕನ್ನಡ ಕಲಿ ದಿನ ಆಚರಿಸುತ್ತಿವೆ. ಈ ವರ್ಷ ೧೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಕನ್ನಡ ಕಲಿಗೆ ಇದೊಂದು ದಾಖಲೆ ದಿನ!
ಕನ್ನಡ ಕಲಿಗಳು ಹತ್ತನೆಯ ವರ್ಷದ ಸಂಭ್ರಮದಲ್ಲಿದ್ದಾರೆ. ಮಾರ್ಚ್ ೨೦, ೨೦೧೦ ಒಂದು ವಿಶೇಷ ದಿನ; ಕನ್ನಡ ಕಲಿಗಳಿಗೆ ಸಡಗರದ ದಿನ. ದಕ್ಷಿಣ ಕ್ಯಲಿಫೊರ್ನಿಯದ ಕನ್ನಡಿಗರಿಗೆ ಹೆಮ್ಮೆಯ ದಿನ. ವಾರ್ಷಿಕ ಕನ್ನಡ ಕಲಿ ದಿನಾಚರಣೆಯೊಂದಿಗೆ ಹತ್ತನೆಯ ವರ್ಷದ ಹಬ್ಬ ಅರ್ವೈನ್ ನಗರದ ಸಂಪ್ರದಾಯ ವನದ ಸಮುದಾಯ ಭವನದಲ್ಲಿ ವಿಜೃಂಭಣೆಯೊಂದಿಗೆ ಜರುಗಿತು..
ಕನ್ನಡ ಕಲಿ ದಿನಾಚರಣೆ ಎಲ್ಲ ಕನ್ನಡ ಕಲಿ ಕ್ರಿಯಾಕೇಂದ್ರಗಳ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಮತ್ತು ಕನ್ನಡ ಜ್ಞಾನ, ಪ್ರತಿಭೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮ. ಶಿಕ್ಷಕರ ಮತ್ತು ಪಾಲಕರ ಸಮ್ಮಿಲನ; ಕನ್ನಡ ಕಲಿಸುವ ವಿಧಾನಗಳ ವಿಚಾರ ವಿನಿಮಯ; ಕನ್ನಡ ಮತ್ತು ಸಾಂಸ್ಕೃತಿಕ ಕಮ್ಮಟಗಳು, ಇತ್ಯಾದಿ. ಈ ಕಾರ್ಯಕ್ರಮವನ್ನು ೨೦೦೬ ರಿಂದ ನಡೆಸಲಾಗುತ್ತಿದೆ.
ಕನ್ನಡ ಕಲಿ ದಿನ ೨೦೦೯
ಕನ್ನಡ ಕಲಿ ದಿನ ೨೦೦೮
ಮತ್ತೊಮ್ಮೆ ಕನ್ನಡ ಕಲಿ ಮಕ್ಕಳೆಲ್ಲ ಒಂದೆ ಸೂರಿನಡಿ ನೆರೆದು ವಿಜೃಂಭಿಸಲಿದ್ದಾರೆ. ದಕ್ಷಿಣ ಕ್ಯಲಿಫೊರ್ನಿಯದ ಕನ್ನಡ ಕಲಿ ಅಧ್ಯಾಯಗಳು ಸೇರಿ ಕನ್ನಡ ಕಲಿ ದಿನ ಆಚರಿಸುತ್ತಿವೆ. ಕನ್ನಡ ಕಲಿ, ವ್ಯಾಲಿಯ ಮುಂದಾಳುತನದಲ್ಲಿ ಜರುಗಲಿರುವ ಈ ಸಮ್ಮಿಲನ ಹೊಸ ಸ್ಫೂರ್ತಿಯನ್ನು ತುಂಬುವುದರಲ್ಲಿ ಸಂಶಯವಿಲ್ಲ.
ಕನ್ನಡ ಕಲಿ ದಿನ ೨೦೦೬
*** ವಿಶ್ವೇಶ್ವರ ದೀಕ್ಷಿತ (ಚಿತ್ರಗಳು: ವೆಂಕಟೇಶ ಚಕ್ರವರ್ತಿ)
ಕನ್ನಡ ಕಲಿ ದಿನ ೨೦೦೬ ನ್ನು ಕಳೆದ ಅಕ್ಟೊಬರ ೨೯ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನಡ ಕಲಿ ಅಧ್ಯಾಯದಲ್ಲಿ ಇದು ಮತ್ತೊಂದು ಮಹತ್ವದ ಮೈಲಿಗಲ್ಲು. ಎಲ್ಲ ಕನ್ನಡ ಕಲಿ ಮಕ್ಕಳು ಒಂದಾಗಿ ತಮ್ಮ ಕನ್ನಡತನವನ್ನು ಮೆರೆದರು. ಇದರೊಂದಿಗೆ ಸರಸ್ವತಿ ಪೂಜೆ ಮತ್ತು ಶಿಕ್ಷಕರ ದಿನಗಳನ್ನೂ ಆಚರಿಸಲಾಯಿತು.