ಕಂನುಡಿ - ಲೋಕಾರ್ಪಣೆ ಮತ್ತು ಪ್ರಾತ್ಯಕ್ಷಿಕೆ

ಕಂನುಡಿ - ಕನ್ನಡಕ್ಕೆ ಒಂದು ನಿದರ್ಶಕ ಪದ ಸಂಪಾದಕ

(OPOK! ಮತ್ತು OHOK! ನಿಯಮ ಮತ್ತು ನೆಲೆ-ತಿಳಿವುಗಳ ಆಧಾರದ ಮೇಲೆ)

Released by Shri T.S. Nagabharana

on Dec 15, 2022

Under Nimmallige Kannada Koota program

by Karnataka Cultural Association of Southern California

ಕಂನುಡಿ, OPOK! ಮತ್ತು OHOK! ನಿಯಮಗಳನ್ನು ಆಧರಿಸಿ ಮತ್ತು ನೆಲೆ-ತಿಳಿವನ್ನು ಒಳಗೊಂಡು ರಚಿತವಾದ ಒಂದು ನಿದರ್ಶಕ ಪಠ್ಯ ಸಂಪಾದಕ. ಕನ್ನಡಕ್ಕೆ OHOK!, ಅಂದರೆ Ottu Haku Ottu Koḍu! (ಒತ್ತು ಹಾಕು ಒತ್ತು ಕೊಡು), ಎನ್ನುವ ಒಂದು ಊಡುವಳಿಯನ್ನು ಎತ್ತಿ ತೋರಿಸುತ್ತಿದೆ. ಒತ್ತಡ ಗ್ರಹಿಸಬಲ್ಲ ಸೂಕ್ಷ್ಮ ಇನ್‌ಪುಟ್ ಸಾಧನಗಳಿಗೆ ಇದು ವಿಶೇಷವಾಗಿ ಸೂಕ್ತವಾಗಿದೆಯಾದರೂ, ಪ್ರಸ್ತುತ ಆನ್‌ಲೈನ್ ಅನುಷ್ಠಾನವು ಸಾಮಾನ್ಯ ಯಾಂತ್ರಿಕ ಕೀಬೋರ್ಡ್ ಅನ್ನು ಬಳಸುತ್ತದೆ. OHOK! ಮೂರು ಸಂಭಾವ್ಯ ಬಗೆಗಳನ್ನು ಹೊಂದಿದೆ - ಸ್ವ-ಒತ್ತು (ದ್ವಿತ್ವ), ಕಂಡಂತೆ, ಮತ್ತು ಅಂದಂತೆ. ಕಂಡಂತೆ ಬಗೆ ಉಲಿಮಿಕ ಕ್ರಮವನ್ನು ಅನುಸರಿಸುವುದಿಲ್ಲ ಎಂದು ಗಮನಿಸಬಹುದು. ಆದಾಗ್ಯೂ, ಉಲಿಮೆಗಳನ್ನು ಒಳದಿನಿಸುವ ಬದಲು ಟೈಪಿಸಿದಂತೆ ಕಾಣುವ ಒಲವು ಹೊಂದಿರುವವರಿಗೆ ಈ ಬಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ವೇಗ, ನಿಖರತೆ, ಮತ್ತು ಬಳಸುಗ ಸ್ನೇಹಪರತೆಯನ್ನು ಸಮರ್ಥವಾಗಿ ಹೆಚ್ಚಿಸಲು ನೆಲೆ-ತಿಳಿವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಸಹ ಕಂನುಡಿ ತೋರಿಸಿ ಕೊಡುತ್ತದೆ, ಉದಾಹರಣೆಗೆ, ಊಹಿತ ಸ್ವರ ಆಯ್ಕೆ, ಸ್ವಯಂಚಾಲಿತ ಶೂನ್ಯೀಕರಣ ಮತ್ತು ಆರ್ಕೀಕರಣ. ಕನ್ನಡದಂತಹ ಉಲಿ-ಉಲಿಗಟ್ಟಿನ ಭಾಷೆಗಳಿಗೆ ಅಗತ್ಯವಾದ ನಾಲ್ಕು ರೀತಿಯ ಅಳಿಸುಗಳನ್ನು ಸಹ ಅಳವಡಿಸಲಾಗಿದೆ.

ಕಂನುಡಿ ತಂತ್ರಾಂಶ ಇಲ್ಲಿ ಲಭ್ಯ: https://kannadakali.com/kannudi/kannudi.html