ಪ್ರಕಾಶನ

Publications

The Good & the Bad - ಒಳ್ಳಿದರು-ಕೆಟ್ಟವರು

ಜಗತ್ತಿನಲ್ಲಿ ಒಳ್ಳೆಯದು ಕೆಟ್ಟದ್ದು ಎಲ್ಲಿಂದ ಬಂದವು? ಒಳ್ಳೆಯವರು ಕೆಟ್ಟವರು ಹುಟ್ಟಿದ್ದಾದರೂ ಹೇಗೆ? ಒಂದೇ ಮನೆತನದಲ್ಲಿ ಅಣ್ಣತಮ್ಮಂದಿರಲ್ಲೆ ಒಳ್ಳೆಯವರೂ ಕೆಟ್ಟವರೂ ಇರುತ್ತಾರೆ. ಸಂಸ್ಕಾರ ಸಂಸ್ಕೃತಿ ಕೂಡ ಒಂದೇ.‌ ಆದರೂ, ಯಾಕೆ ಹೀಗೆ ಎಂದು ಈ ಚೆನ್ನುಡಿ ವಿವರಿಸಬಲ್ಲುದೆ?

ಟಕಟಕ ಜೋಕುಗಳು Knock-Knock Jokes

ಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ. ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಲ್ಲವು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ?

ನುಡಿದರೆ ಮುತ್ತಿನ ಹಾರ

ಏನು ನುಡಿಯುತ್ತೀರೋ ಅದೇ ನೀವು! ಮಾತಿನ ಮಹತ್ವ ಅಷ್ಟಿದೆ. ಪ್ರಪಂಚದ ವ್ಯವಹಾರಗಳೆಲ್ಲವೂ ಮಾತಿನಿಂದಲೇ. ಮಾತಿನಿಂದಲೆ ಗಳಿಕೆ, ಮಾತಿನಿಂದಲೆ ಉಳಿಕೆ. ಮಾತಿನಿಂದಲೆ ತಿಳಿವು, ಮಾತಿನಿಂದಲೆ ಅಳಿವು. ಹಾಗಾದರೆ ನುಡಿ ಅಂದರೇನು? ಮಾತಿನ ಮಹತ್ವ ಏನು? ನಮ್ಮ ನುಡಿ ಹೇಗಿರಬೇಕು? ವಚನ ಸುಭಾಷಿತ ಸ್ಮೃತಿಗಳು ಏನನ್ನುತ್ತವೆ?

ಹುಚ್ಚರಣೆ: ದಾಸರನ್ನು ಆಡಿ ಕೊಲ್ಲಿರೋ! ಮತ್ತು ಕನ್ನಡದ ಏಳು ಅಪಸ್ವರಗಳು

[ ಕನ್ನಡವೆಂಬುದು ಮಂತ್ರ ಕಣಾ!
ಹೌದು. ಕನ್ನಡ ಉಚ್ಚಾರ ಸೂಕ್ಷ್ಮವಾದದ್ದು. ಉಚ್ಚಾರದಲ್ಲಿ ನಿಖರತೆ, ಸ್ಪಷ್ಟತೆ, ಒತ್ತು, ಬಿಗಿ, ಮತ್ತು ವಿರಾಮಗಳು ಅವಶ್ಯ. ಉಚ್ಚಾರ ಸರಿ ಇರದಿದ್ದರೆ, ಯಾವ ವೃತ್ತಾಸುರ ಉದ್ಭವಿಸದಿದ್ದರೂ, ಅಪಾರ್ಥ, ಅನಾಹುತ, ಆಭಾಸ, ಇಲ್ಲವೆ ನಗೆಪಾಟಲು ಕಟ್ಟಿಟ್ಟ ಬುತ್ತಿ. - ಸಂ.]

ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?

[ ಮನುಷ್ಯ ಜಾತಿಗೆ ವಿಶಿಷ್ಟವಾದವುಗಳಲ್ಲಿ ಪ್ರೀತಿ ಕೂಡ ಒಂದು. ಪ್ರೀತಿ ಎಂದರೆ ಏನು? ಪ್ರೀತಿ ಒಂದು ಅನುಭವ. ಭೌತಿಕ, ಮಾನಸಿಕ, ಮತ್ತು ಅಧ್ಯಾತ್ಮಿಕ ಸ್ತರಗಳಲ್ಲಿ, ಅವರವರ ಪ್ರೀತಿ ಅವರವರ ಅನುಭವಕ್ಕೆ ಸೀಮಿತ. ಸಾರ್ವತ್ರಿಕವಾಗಿ ಅದು ಹೀಗೇ ಇರಬೇಕು ಎಂದು ಹೇಳಲಾಗುವುದಿಲ್ಲ. ಆದರೂ, ಪ್ರೀತಿಗೂ ಅಪೇಕ್ಷೆಗೂ ನಂಟು ಸಹಜ. ಪ್ರೀತಿಯ ಬಗ್ಗೆ ಅನೇಕ ವಾದಗಳು ಇವೆ. ಅಪೇಕ್ಷೆಯೇ ಪ್ರೀತಿ ಎಂದು ಒಂದು ಸಾಧಿಸಿದರೆ ನಿರಪೇಕ್ಷ ಪ್ರೀತಿಯೇ ಪ್ರೀತಿ ಎನ್ನುತ್ತದೆ ಮತ್ತೊಂದು. ಅಲ್ಲದೆ, "ಪ್ರೀತಿ ಒಂದು ಹುಚ್ಚು ಚಟ" ಎಂದು ಹೇಳುತ್ತಾನೆ ಮಂಕುತಿಮ್ಮ. ನಿಮ್ಮ ಪ್ರೀತಿ ಎಂಥದ್ದು? ನಿಮ್ಮ ಅಪೇಕ್ಷೆಗಳೇನು? ವಿವೇಕ ಬೆಟ್ಕುಳಿ ಅವರ ಈ ಪ್ರೀತಿ ಲೇಖನವನ್ನು ಓದಿ, ಅವರ ದನಿಯಲ್ಲೆ ಕೇಳಿ; ಪ್ರೀತಿಯ ಮೂಲವನ್ನು ಕಂಡುಕೊಳ್ಳಿ- ಸಂ.]

ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ!

ಸಾವಿತ್ರಿಬಾಯಿ ಅವರ ದಿವ್ಯ ಸ್ಮರಣೆಯಲ್ಲಿ ಅವರ ಈ ಜನ್ಮದಿನಾಂಕವನ್ನೇ “ಶಿಕ್ಷಕರ ದಿನ-ಅಕ್ಷರದ ದಿನ” ಎಂದು ನ್ಯಾಯಸಮ್ಮತವಾಗಿ, ಆದರಪೂರ್ವಕವಾಗಿ ದೇಶಾದ್ಯಂತ ಮಾನ್ಯಮಾಡಬೇಕು. ಇಡೀ ಭಾರತವು, “ಆ ಮಾತಾಯಿ ನಮ್ಮ ನಡುವೆ ಎದ್ದು ಬಂದು, ಬಿದ್ದು ಬೇನೆಯಲ್ಲಿದ್ದ ಲೆಕ್ಕವಿಲ್ಲದಷ್ಟು ಮಂದಿ ಎದ್ದುಬರುವಂತೆ ಮಾಡಿದಳಲ್ಲ!" ಎಂಬ ಅಭಿಮಾನದಿಂದ, ಧನ್ಯತೆಯಿಂದ ಅವರನ್ನು ಈವೊತ್ತು ನೆನಪಿಸಿಕೊಳ್ಳಬೇಕು.

ಕೃಷ್ಣಮಾಸದ ಪಾರ್ಥನ ಪ್ರಾರ್ಥನೆ‌

ಎಲ್ಲರಿಗೂ ಕೃಷ್ಣಮಾಸ ಶುಭ-ಶೋಭೆಗಳನ್ನು ತರಲಿ!

ಶ್ರೀ ಕೃಷ್ಣ ಪರಮಾತ್ಮ ನರನಿಗೆ ಗೀತೋಪದೇಶ ಮಾಡಿದ ತಿಂಗಳು. ಅಂದರೆ, ಗೀತಾ ಜಯಂತಿಯ ತಿಂಗಳು.  ಗೀತೆಯನ್ನು ಪಠಿಸುತ್ತ, ಮನನಿಸುತ್ತ, ಅರ್ಜುನನ ನಿಮಿತ್ತ  ಮನುಜರಿಗೆ ದೊರಕಿದ  ಕೃಷ್ಣ ಎನ್ನುವ ಜ್ಞಾನಾಮೃತವನ್ನು ಸವಿಯುತ್ತ ಕೃಷ್ಣಮಾಸವಿಡಿ ನಲಿಯೋಣ