Novರಾತ್ರಿ ಸರಣಿ : ಅಕ್ಟೋಬರ ೨೩ - ನವಂಬರ ೧ (ಕನ್ನಡ ಹಬ್ಬ)
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
- ಡಿ.ಎಸ್. ಕರ್ಕಿ
ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು
Novರಾತ್ರಿ ಸರಣಿ, ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ
❌೧೦. ಕನ್ನಡ ಆಡಳಿತ ಭಾಷೆ ಆದದ್ದು ಕರ್ನಾಟಕ ಹುಟ್ಟಿದ ಮೇಲೆ❌
ತಪ್ಪು.
ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ವಿಜಯನಗರ ಸಾಮ್ರಾಜ್ಯಗಳು ಮತ್ತು ಇತ್ತೀಚಿನ ಮೈಸೂರು ರಾಜ್ಯ ಎಲ್ಲವುಗಳಲ್ಲೂ ಕನ್ನಡ ಆಡಳಿತ ಭಾಷೆ ಆಗಿತ್ತು. ಬ್ರಿಟಿಷರು ಕೂಡ, ಕನ್ನಡ ಕಲಿತು, ಕನ್ನಡಿಗರೊಡನೆ ಕನ್ನಡದಲ್ಲಿ ವ್ಯವಹರಿಸುವ ನೀತಿಯನ್ನು ಇಟ್ಟುಕೊಂಡಿದ್ದರು. ಒಂದು ಸಾಮ್ರಾಜ್ಯದ ಮಂತ್ರಾಲೋಚನೆ, ರಕ್ಷಣೆ, ಹಣಕಾಸು, ಕಾನೂನು ಮತ್ತು ನ್ಯಾಯ, ಸಂಸ್ಕೃತಿ, ಮತ್ತು ಜನರ ನಿತ್ಯ ವ್ಯವಹಾರ ಎಲ್ಲವುಗಳನ್ನು ನಿಭಾಯಿಸಲು ಕನ್ನಡ ಆಗ ಸಮರ್ಥವಾಗಿತ್ತು, ಈಗಲೂ ಸಮರ್ಥವಾಗಿದೆ.
ಇಲ್ಲಿಯ ವರೆಗೆ ತಾಳ್ಮೆಯಿಂದ ಓದಿಕೊಂಡು ಬಂದ ನಿಮಗೆ ಕಾಯ್ದಿದೆ: ರಾಜ್ಯೋತ್ಸವದ ಬೋನಸ್ಸು! ಮಿಥ್ಯೆ ೧೧ ಕನ್ನಡ ಅಭಿಮಾನ. ಇದನ್ನೂ ನೋಡಿ/ಓದಿ.
ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧೦, ರಾಜ್ಯೋತ್ಸವ, ನವಂಬರ ೦೧, ೨೦೨೩
ದಿನ ೯, ಮಿಥ್ಯೆ ೯ : ಕನ್ನಡದ ಮರೆವು 🡄 🡆 ದಿನ ೧೦, ಮಿಥ್ಯೆ ೧೧ : ಕನ್ನಡಿಗರು ಅಭಿಮಾನಶೂನ್ಯರು!