Novರಾತ್ರಿ ಸರಣಿ, ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ

Novರಾತ್ರಿ ಸರಣಿ : ಅಕ್ಟೋಬರ ೨೩ - ನವಂಬರ ೧ (ಕನ್ನಡ ಹಬ್ಬ)
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
     - ಡಿ.ಎಸ್.‌ ಕರ್ಕಿ

ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು

Novರಾತ್ರಿ ಸರಣಿ, ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ

❌೭. ಕನ್ನಡ ಕಲಿಯುವುದು ಸುಲಭವಲ್ಲ❌

ತಪ್ಪು. ಇದು ಕನ್ನಡವನ್ನು ಇಂಗ್ಲೀಷಿಗೆ ಮೇಲ್ನೋಟದಲ್ಲಿ ಹೋಲಿಸಿ ಸಾಮಾನ್ಯವಾಗಿ ಹೇಳುವ ಹಗುರ ಮಾತು. "ಕನ್ನಡದಲ್ಲಿ ೪೯ ಅಕ್ಷರಗಳು ಮತ್ತು ಅವುಗಳ ಒತ್ತಕ್ಷರಗಳು ಇವೆ; ಇಂಗ್ಲಿಷಲ್ಲಿ ಕೇವಲ ೨೬" ಎಂಬುದು ಅವರ ವಾದ, ಕೇವಲ ಸಂಖ್ಯೆಗಳ ಗುದ್ದಾಟ. ಕೆದಕಿ ನೋಡಿದರೆ, ಇಂಗ್ಲೀಷ್ ನಲ್ಲಿ ದೊಡ್ಡ ಮತ್ತು ಸಣ್ಣ ಅಕ್ಷರಗಳು ಸೇರಿ ೫೨ ಅಕ್ಷರಗಳು ಮೇಲಾಗಿ ೪೪ ಉಲಿಮೆಗಳು (phonemes) ಕೂಡ ಇವೆ. ಉಚ್ಚಾರಕ್ಕೂ ಬರೆಯುವುದಕ್ಕೂ ಏಕರೂಪಿ ಸಂಬಂಧವಿಲ್ಲ. ಕನ್ನಡ ವರ್ಣಮಾಲೆ ತಾರ್ಕಿಕವಾಗಿದ್ದು ಮತ್ತು ಉಲಿಮಿಕ (phonetic) ಆಗಿದೆ. ಸಂಧಿ, ಸಮಾಸ, ಮತ್ತು ಹೊಸ ಪದಗಳನ್ನು ಹುಟ್ಟಿಸಿಕೊಳ್ಳಲು ತದ್ಭವ ನಿಯಮಗಳಿವೆ. ಮೇಲಾಗಿ ಕನ್ನಡ ಅರ್ಥ ದೃಷ್ಟಿಯಿಂದ (semantically) ಶ್ರೀಮಂತವಾಗಿದೆ.

ಕನ್ನಡದ ವೈಜ್ಞಾನಿಕ ದೌರ್ಬಲ್ಯದ ಮಿಥ್ಯೆ ೮ನ್ನು ನಾಳೆ ಅರಿತುಕೊಳ್ಳೋಣ.
ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೭, ಅಕ್ಟೋಬರ ೨೯, ೨೦೨೩

ದಿನ ೬, ಮಿಥ್ಯೆ ೬ : ಕನ್ನಡದ ದುಷ್ಪ್ರಭಾವ 🡄   🡆 ದಿನ ೮, ಮಿಥ್ಯೆ ೮ : ಕನ್ನಡದ ವೈಜ್ಞಾನಿಕ ದೌರ್ಬಲ್ಯ