Novರಾತ್ರಿ ಸರಣಿ : ಅಕ್ಟೋಬರ ೨೩ - ನವಂಬರ ೧ (ಕನ್ನಡ ಹಬ್ಬ)
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
- ಡಿ.ಎಸ್. ಕರ್ಕಿ
ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು
Novರಾತ್ರಿ ಸರಣಿ, ದಿನ ೯, ಮಿಥ್ಯೆ ೯ : ಕನ್ನಡದ ಮರೆವು
❌೯. ಕನ್ನಡ ಮಾತಾಡದಿದ್ದರೆ ಮರೆತು ಹೋಗುತ್ತದೆ❌
ತಪ್ಪು. ಬಹಳ ಕಾಲ ಕನ್ನಡ ಮಾತಾಡದೆ ಇದ್ದಾಗ, ಓದದೆ ಇದ್ದಾಗ, ಅಥವ ಬೇರೆ ದೇಶಕ್ಕೆ ವಲಸೆ ಹೋದಾಗ ಕನ್ನಡ ಮರೆತಂತೆ ಅನಿಸಿದರೂ ಬೇರುಗಳು ಗಟ್ಚಿಯಾಗಿ ಉಳಿದಿರುತ್ತವೆ. ಸರಿ ಸಂದರ್ಭದಲ್ಲಿ ಕನ್ನಡ ಮತ್ತೆ ಚಿಗುರುವುದು ಖಚಿತ. ನನ್ನದೆ ಉದಾಹರಣೆ ಕೊಡುವುದಾದರೆ, ಅಮೆರಿಕಕ್ಕೆ ಬಂದ ಮೇಲೆ ಕೆಲ ವರ್ಷ ಕನ್ನಡ ಮಾತಾಡಲೆ ಇಲ್ಲ. ಅಂಥ ಸಂದರ್ಭಗಳೆ ಬರಲಿಲ್ಲ. ಮುಂದೆ, ೨೦ ವರ್ಷಗಳ ನಂತರ ಭಗವದ್ಗೀತೆಯನ್ನು ಕನ್ನಡಕ್ಕೆ ಅನುದನಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾಯ್ತು. ಕನ್ನಡ ಮರೆತಿದೆ, ಕನ್ನಡ ನನಗೆ ಬಾರದು, ಕನ್ನಡ ಕಠಿನ ಎನ್ನುವ ಅನೇಕ ಶಂಕೆಗಳನ್ನು ತಲೆಯಲ್ಲಿ ತುಂಬಿಕೊಂಡು, ಮೊದಲ ಅಧ್ಯಾಯದಲ್ಲೆ, ಆ ಅರ್ಜುನನ ಹಾಗೆಯೆ ಕೈ ಚೆಲ್ಲಿ ಕುಳಿತುಕೊಂಡೆ. ಮುಂದೆ ನಡೆದದ್ದು ಕರ್ನಾಟಕ! ನುಡಿದದ್ದು ಭಗವತ್ ಕಂನುಡಿ!
ಕನ್ನಡದಲ್ಲಿ ಆಡಳಿತದ ಮಿಥ್ಯೆ ೧೦ನ್ನು ನಾಳೆ ಅರಿತುಕೊಳ್ಳೋಣ
ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೯, ಅಕ್ಟೋಬರ ೩೧, ೨೦೨೩
ದಿನ ೮, ಮಿಥ್ಯೆ ೮ : ಕನ್ನಡದ ವೈಜ್ಞಾನಿಕ ದೌರ್ಬಲ್ಯ 🡄 🡆 ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ