Novರಾತ್ರಿ ಸರಣಿ,ದಿನ ೮,ಮಿಥ್ಯೆ ೮: ಕನ್ನಡದ ವೈಜ್ಞಾನಿಕ ದೌರ್ಬಲ್ಯ

Novರಾತ್ರಿ ಸರಣಿ : ಅಕ್ಟೋಬರ ೨೩ - ನವಂಬರ ೧ (ಕನ್ನಡ ಹಬ್ಬ)
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
     - ಡಿ.ಎಸ್.‌ ಕರ್ಕಿ

ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು

Novರಾತ್ರಿ ಸರಣಿ, ದಿನ ೮, ಮಿಥ್ಯೆ ೮ : ಕನ್ನಡದ ವೈಜ್ಞಾನಿಕ ದೌರ್ಬಲ್ಯ

❌೮. ಮುಂದುವರೆದ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ಕನ್ನಡದಲ್ಲಿ ಅಸಾಧ್ಯ❌

ತಪ್ಪು. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಮತ್ತು ಅದರ ಅನೇಕ ಘಟಕಗಳು, ಪ್ರಾಧಿಕಾರಗಳು ಸಾಕಷ್ಟು ಕೆಲಸ ಮಾಡಿವೆ, ಮಾಡುತ್ತಿವೆ. ಕನ್ನಡದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪುಸ್ತಕಗಳ ಪ್ರಕಟಣೆ ವಿವಿಧ ಕ್ಷೇತ್ರಗಳ ಪಾರಿಭಾಷಿಕ ಪದಗಳ ಪಟ್ಟಿ ವಿಜ್ಞಾನ ಪ್ರದರ್ಶನ, ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಿವೆ. ಕರ್ನಾಟಕ ವಿಜ್ಞಾನ ಪರಿಷತ್ತು ನಿರಂತರ ದುಡಿಯುತ್ತಿದೆ. ಸದ್ಯ, ಕನ್ನಡದಲ್ಲಿ ಮುಂದುವರೆದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿಲ್ಲ, ನಿಜ; ಆದರೆ ಹಾಗೆ ಕಲಿಯುವುದೇ ಅಸಾಧ್ಯ ಎನ್ನುವುದು ತಪ್ಪು. ಕನ್ನಡದಲ್ಲಿ ಕಲಿತ ವಿಜ್ಞಾನದ ವಿದ್ಯಾರ್ಥಿಗಳು ಸಮರ್ಥ ವಿಜ್ಞಾನಿಗಳು, ಇಂಜಿನಿಯರುಗಳು, ವೈದ್ಯರು, ಮತ್ತು ಸಂಶೋಧಕರು ಆಗಿದ್ದಾರೆ.

ಕನ್ನಡದ ಮರೆವಿನ ಮಿಥ್ಯೆ ೯ನ್ನು ನಾಳೆ ಅರಿತುಕೊಳ್ಳೋಣ.
ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೮, ಅಕ್ಟೋಬರ ೩೦, ೨೦೨೩
 

ದಿನ ೭, ಮಿಥ್ಯೆ ೭ : ಕನ್ನಡದ ದುಷ್ಪ್ರಭಾವ  🡄  🡆 ದಿನ ೯, ಮಿಥ್ಯೆ ೯ : ಕನ್ನಡದ ವೈಜ್ಞಾನಿಕ ದೌರ್ಬಲ್ಯ