Novರಾತ್ರಿ ಸರಣಿ : ಅಕ್ಟೋಬರ ೨೩ - ನವಂಬರ ೧ (ಕನ್ನಡ ಹಬ್ಬ)
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
- ಡಿ.ಎಸ್. ಕರ್ಕಿ
ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು
Novರಾತ್ರಿ ಸರಣಿ, ದಿನ ೬,ಮಿಥ್ಯೆ ೬: ಕನ್ನಡದ ದುಷ್ಪ್ರಭಾವ
❌೬. ಕನ್ನಡ ಕಲಿತರೆ ಇತರ ಭಾಷೆಗಳ ಕಲಿಕೆ ಕುಂಠಿತವಾಗುತ್ತದೆ❌
ತಪ್ಪು. ಈ ಕಲ್ಪನೆ ತಪ್ಪು ಎಂದು ಅನೇಕ ವರದಿಗಳು ಸಾಬೀತು ಮಾಡಿವೆ. ಮೇಲಾಗಿ ಎರಡು ಭಾಷೆಗಳನ್ನು ಕಲಿತಾಗ ಬುದ್ದಿ ಚುರುಕಾಗುವುದು ಎಂದು ತಿಳಿಸುತ್ತವೆ. ಬೆಂಗಳೂರಿನಲ್ಲಿ, ಪ್ರಚಲಿತವಿರುವ ಎಲ್ಲ ಭಾಷೆಗಳನ್ನು ತಿಳಿದು ವ್ಯವಹರಿಸುವವರು ಕನ್ನಡಿಗರು ಮಾತ್ರ! ಬೆಂಗಳೂರು ಭಾರತದ ಸಿಲಿಕಾನ್ ನಗರವಾಗಿ ಎಲ್ಲ ಭಾಷಿಕರನ್ನು ಆಕರ್ಷಿಸುತ್ತಿರುವುದು ಸುಮ್ಮನೆ ಏನು? ಅತ್ಯಂತ ಸೃಜನ ಶೀಲ ಉದ್ಯಮ, ಸಾಹಿತ್ಯ, ಸಂಸ್ಕೃತಿಗಳ ಕೇಂದ್ರವಾಗಿ ಸಿಲಿಕಾನ್ ನಗರ ಎಂದು ಹೆಸರಾಗಿದ್ದು, ಇದಕ್ಕೆ ಕನ್ನಡಿಗರ ಬಹುಭಾಷಿಕತನವೆ ಕಾರಣ ಅಲ್ಲವೆ?
ಕನ್ನಡದ ಕಠಿನತೆಯ ಮಿಥ್ಯೆ ೭ನ್ನು ನಾಳೆ ಅರಿತುಕೊಳ್ಳೋಣ.
ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೬, ಅಕ್ಟೋಬರ ೨೮, ೨೦೨೩
ದಿನ ೫, ಮಿಥ್ಯೆ ೫ : ಕನ್ನಡದ ಅರಾಷ್ಟ್ರೀಯತೆ 🡄 🡆 ದಿನ ೭, ಮಿಥ್ಯೆ ೭ : ಕನ್ನಡದ ಅದೈವಿಕತೆ