Novರಾತ್ರಿ ಸರಣಿ : ಅಕ್ಟೋಬರ ೨೩ - ನವಂಬರ ೧ (ಕನ್ನಡ ಹಬ್ಬ)
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
- ಡಿ.ಎಸ್. ಕರ್ಕಿ
ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು
Novರಾತ್ರಿ ಸರಣಿ, ದಿನ ೫, ಮಿಥ್ಯೆ ೫: ಕನ್ನಡದ ಅದೈವಿಕತೆ
❌೫. ಕನ್ನಡ ದೇವಭಾಷೆ (ಧಾರ್ಮಿಕ ಭಾಷೆ) ಅಲ್ಲ❌
ತಪ್ಪು. ಹಲವಾರು ಜೈನ ಗ್ರಂಥಗಳು ಕನ್ನಡದಲ್ಲಿ ಇವೆ. ಲಿಂಗಾಯತ ಭಾಷೆ ಕನ್ನಡ. ಪುರಂದರಾದಿ ದಾಸಶ್ರೇಷ್ಠರೆಲ್ಲ ಕನ್ನಡದಲ್ಲೆ ಆರಾಧಿಸಿ ವಿಪುಲ ಸಂಗೀತ-ಸಾಹಿತ್ಯ ಸೃಷ್ಟಿಸಿದ್ದಾರೆ. “ದೇವರಿಗೆ ತಿಳಿಯುವುದು ಒಂದೇ ಭಾಷೆ, ಅದು ಕನ್ನಡ ಅಲ್ಲ” ಎನ್ನುವುದು ಹಾಸ್ಯಾಸ್ಪದ. ಸರ್ವಜ್ಞನಾದ ದೇವರಿಗೆ ಎಲ್ಲ ಭಾಷೆಗಳೂ ಗೊತ್ತು. ಸಂಸ್ಕೃತವೂ ದೇವಭಾಷೆ, ಕನ್ನಡವೂ ದೇವಭಾಷೆ; ತಮಿಳು, ತೆಲುಗು, ತುಳು, ಬಡಗ, ಕೊಡವ, ಕೊರಗ, ಕುಡಿಯ, ಗೊಂಡಿ, ಕೊಂಡ. ಮಂಡ, ಕುವಿ, ಕೋಯಾ, ಕೊಲಾಮಿ, ಕುರುಖ, ಒಳ್ಳಾರಿ, ತೋಡ, ದುರುವ, ಬ್ರಾಹ್ವಿಗಳೂ ದೇವಭಾಷೆಗಳು. ಭಕ್ತಿಯೆ ಪರಮ ಭಾಷೆ ಆಗಿರುವ ದೇವರಿಗೆ "ಸುಲಿದ ಬಾಳೆಯ ಹಣ್ಣಿನಂದದಿ ಸುಲಭವಾಗಿಹ ಕನ್ನಡ" ಅಂತರಂಗದ ಮಾತು.
ಕನ್ನಡದ ದುಷ್ಪ್ರಭಾವದ ಮಿಥ್ಯೆ ೬ನ್ನು ನಾಳೆ ಅರಿತುಕೊಳ್ಳೋಣ.
ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೫, ಅಕ್ಟೋಬರ ೨೭, ೨೦೨೩
ದಿನ ೪, ಮಿಥ್ಯೆ ೪ : ಕನ್ನಡದ ಅರಾಷ್ಟ್ರೀಯತೆ 🡄 🡆 ದಿನ ೬, ಮಿಥ್ಯೆ ೬ : ಕನ್ನಡದ ಅದೈವಿಕತೆ