Novರಾತ್ರಿ ಸರಣಿ, ದಿನ ೪,ಮಿಥ್ಯೆ ೪: ಕನ್ನಡದ ಪ್ರಾಂತೀಯತೆ

Novರಾತ್ರಿ ಸರಣಿ : ಅಕ್ಟೋಬರ ೨೩ - ನವಂಬರ ೧ (ಕನ್ನಡ ಹಬ್ಬ)
ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
     - ಡಿ.ಎಸ್.‌ ಕರ್ಕಿ

ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು

Novರಾತ್ರಿ ಸರಣಿ, ದಿನ ೪, ಮಿಥ್ಯೆ ೪ : ಕನ್ನಡದ ಪ್ರಾಂತೀಯತೆ

❌೪. ಕನ್ನಡ ಒಂದು ಪ್ರಾಂತೀಯ ಭಾಷೆ (Kannada is a regional, a provincial, parochial, or a vernacular language)❌

ತಪ್ಪು. ಕನ್ನಡಕ್ಕೆ ಯಾವ ಸೀಮೆಯೂ ಇಲ್ಲ. ಕನ್ನಡಿಗರು ಭಾರತದ ತುಂಬ ಇದ್ದಾರೆ. ವಿದೇಶಗಳಲ್ಲಿಯೂ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿಯೂ ಅಲ್ಲಿಯೂ ಕನ್ನಡ ಮಾತಾಡುತ್ತಾರೆ. ಪ್ರಶ್ನೆ "ಕನ್ನಡ ಮಾತ್ರ ಗೊತ್ತಿರುವ ಒಬ್ಬ ಭಾರತದ ಎಲ್ಲೆಡೆ ಬದುಕುಳಿಯಬಹುದೆ? ಜಗತ್ತಿನ ಎಲ್ಲೆಡೆ ಬದುಕುಳಿಯಬಹುದೆ?" ಎಂದಾದರೆ ಉತ್ತರ “ಇಲ್ಲ.” ಜಗತ್ತಿನ ಎಲ್ಲ ಭಾಷೆಗಳಿಗೂ ಇದೇ ಉತ್ತರ! ಕನ್ನಡ ಗೊತ್ತಿದ್ದರೆ ಕರ್ನಾಟಕದಲ್ಲಿ ಖಂಡಿತ ಬಾಳಬಹುದು ಮತ್ತು ಬೆಳೆಯಬಹುದು. ಆದ್ದರಿಂದ ಕನ್ನಡ ಮತ್ತು ಇತರ ಹಲವು ಭಾರತೀಯ ಭಾಷೆಗಳು ರಾಜ್ಯಗಳ ಭಾಷಗಳು. ಕನ್ನಡ ಕರ್ನಾಟಕ ರಾಜ್ಯದ ಭಾಷೆ. ಈ ಮೊದಲು ಹೇಳಿದಂತೆ, ಎಲ್ಲ ಭಾರತೀಯ ಭಾಷೆಗಳು ರಾಷ್ಟ್ರದ ಭಾಷೆಗಳು ಮತ್ತೂ ಭಾರತೀಯ ಸಂಸ್ಕೃತಿಯ ಆಕರ ಮತ್ತು ವಾಹಿನಿಗಳು. ಆದ್ದರಿಂದ ಕನ್ನಡವನ್ನು (ಭಾರತೀಯ ಭಾಷೆಯನ್ನು) regional, provincial, parochial, vernacular, ಪ್ರಾಂತೀಯ, ಎಂದೆಲ್ಲ ಸಂಬೋಧಿಸುವುದು ತಪ್ಪು. ನಿಜವಾಗಿಯೂ, ಇಂಥ ಮಾತುಗಳು ಹೀಗೆ ಅಸಡ್ಡೆಯಿಂದ ಮಾತಾಡುವವರ ಕಲೋನಿಯಲ್ ಗುಲಾಮೀಯ ಮಾನಸಿಕ ಮತ್ತು ಸಾಂಸ್ಕೃತಿಕ ದೌರ್ಬಲ್ಯಕ್ಕೆ ಕನ್ನಡಿ ಹಿಡಿಯುತ್ತವೆ.

ಕನ್ನಡದ ಅದೈವಿಕತೆಯ ಮಿಥ್ಯೆ ೫ನ್ನು ನಾಳೆ ಅರಿತುಕೊಳ್ಳೋಣ
ನಿಮ್ಮವನೆ ಆದ
ವಿಶ್ವೇಶ್ವರ ದೀಕ್ಷಿತ
ಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೪, ಅಕ್ಟೋಬರ ೨೬, ೨೦೨೩

ದಿನ ೩, ಮಿಥ್ಯೆ ೩ : ಕನ್ನಡದ ಅರಾಷ್ಟ್ರೀಯತೆ 🡄 🡆 ದಿನ ೫, ಮಿಥ್ಯೆ ೫ : ಕನ್ನಡದ ಅದೈವಿಕತೆ