ಜಾಗತಿಕ ಹಳ್ಳಿ ಹಬ್ಬ

ತಾಂತ್ರಿಕ, ಆರ್ಥಿಕ, ಮಾಹಿತಿ ಕ್ಷೇತ್ರಗಳ ಅಗಾಧ ಪ್ರಗತಿಯಿಂದ ಜಗತ್ತೆ ಒಂದು ಹಳ್ಳಿ ಆದರೆ, ಜನರೆಲ್ಲ ಕಲೆತು ಪ್ರತಿ ಹಳ್ಳಿಯೂ ಜಗತ್ತಿನ ಪ್ರತೀಕ ಆಗುತ್ತಿದೆ. ಕರಗಿಸುವ ಕಡಾಯಿ ಎಂದು ಹೆಸರಾದ ವಲಸೆ ಬಂದವರ ದೇಶ ಅಮೆರಿಕದಲ್ಲಿ ಈ ಮಾತು ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಈ ವೈವಿಧ್ಯವನ್ನು ಕೊಂಡಾಡುವುದೆ ಅರ್ವೈನ್ ಜಾಗತಿಕ ಹಳ್ಳಿ ಜಾತ್ರೆಯ ಉದ್ದೇಶ.