*** ವಿಶ್ವೇಶ್ವರ ದೀಕ್ಷಿತ
ತಾಂತ್ರಿಕ, ಆರ್ಥಿಕ, ಮಾಹಿತಿ ಕ್ಷೇತ್ರಗಳ ಅಗಾಧ ಪ್ರಗತಿಯಿಂದ ಜಗತ್ತೆ ಒಂದು ಹಳ್ಳಿ ಆದರೆ, ಜನರೆಲ್ಲ ಕಲೆತು ಪ್ರತಿ ಹಳ್ಳಿಯೂ ಜಗತ್ತಿನ ಪ್ರತೀಕ ಆಗುತ್ತಿದೆ. ಕರಗಿಸುವ ಕಡಾಯಿ ಎಂದು ಹೆಸರಾದ ವಲಸೆ ಬಂದವರ ದೇಶ ಅಮೆರಿಕದಲ್ಲಿ ಈ ಮಾತು ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಈ ವೈವಿಧ್ಯವನ್ನು ಕೊಂಡಾಡುವುದೆ ಅರ್ವೈನ್ ಜಾಗತಿಕ ಹಳ್ಳಿ ಜಾತ್ರೆಯ ಉದ್ದೇಶ. ಐಕ್ಯತೆಗೆ ನಡೆ, ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳು, ವಿವಿಧ ಸಂಸ್ಕೃತಿಗಳಿಂದ ಮನರಂಜಕ ಕಾರ್ಯಕ್ರಮಗಳು ಮತ್ತು ರುಚಿಕರ ತಿನಿಸುಗಳು, ಮತ್ತು ಎಲ್ಲರೊಡನೆ ಕಲೆತು ಕಲಿಯುವ ಸದವಕಾಶ ಇಲ್ಲಿವೆ.
ಈ ಹಳ್ಳಿ ಹಬ್ಬದಲ್ಲಿನಿಯತವಾಗಿ ಭಾಗವಹಿಸುತ್ತ, ಸ್ಥಳೀಯರಿಗೆ ಕರ್ನಾಟಕವನ್ನು ಪರಿಚಯಿಸುತ್ತ, ಕನ್ನಡ ಮತ್ತು ಭಾರತೀಯ ಸಂಸ್ಕೃತಿಯ ಅರಿವನ್ನು ಕನ್ನಡ ಕಲಿ ಮೂಡಿಸುತ್ತಿದೆ.
ಕನ್ನಡ ಕಲಿ ಅರ್ವೈನಿನ ವಿದ್ಯಾರ್ಥಿಗಳ ಕನ್ನಡ ಹಾಡು-ಕುಣಿತಗಳ ಜೊತೆಗೆ ಕನ್ನಡ ಕಲಿಯ ಉದ್ದೇಶ, ಕಲಿಕಾ ವಿಧಾನ, ಸಾಧನೆ ಮತ್ತಿತರ ಮಾಹಿತಿ ಸಲಕರಣೆಗಳ ಪ್ರದರ್ಶನ ಕೂಡ ಇಲ್ಲಿದೆ.
ಜಾಗತಿಕ ಹಳ್ಳಿ ಹಬ್ಬ ೨೦೦೯ ರಲ್ಲಿ ಕನ್ನಡ ಕಲಿ
ಜಾಗತಿಕ ಹಳ್ಳಿ ಹಬ್ಬ ೨೦೦೮ ರಲ್ಲಿ ಕನ್ನಡ ಕಲಿ
ಜಾಗತಿಕ ಹಳ್ಳಿ ಹಬ್ಬ ೨೦೦೭ ರಲ್ಲಿ ಕನ್ನಡ ಕಲಿ
ತಾಗುಲಿ : Irvine global village festival