ಕನ್ನಡ ಕಲಿ ಸಂಪನ್ಮೂಲಗಳು
ಕನ್ನಡ ಕಲಿ ಶಾಲೆ ಪ್ರಾರಂಭಿಸುವುದು ಮತ್ತು ಮುಂದುವರೆಸುವುದು
ಕಲಿಕೆಯ ಕ್ರಮ ಸರಳ, ಸುಲಭವಾಗಿರಲಿ; ಸೂತ್ರಿತವಾಗಿ ಕಠೋರವಾಗಿ ಇರದಿರಲಿ; ವಿದ್ಯಾರ್ಥಿಗಳ ಪರಿಸರಕ್ಕೆ ಹೊಂದಿಕೊಳ್ಳುವಂತಿರಲಿ. ಗುರಿ ಸಾಧನೀಯವಾಗಿರಲಿ.
ಅ. ಕಾರ್ಯ ವ್ಯವಸ್ಥೆ (Logistics)
- ಕಲಿಕೆ ಮುಖ್ಯ; ಆಡಳಿತ ಅಮುಖ್ಯ
- ತಂದೆ ತಾಯಿಗಳೊಡನೆ ಮಾತಾಡಿ; ಮಕ್ಕಳನ್ನು ಸೇರಿಸಿಕೊಳ್ಳಿ;
- ತರಗತಿ ಆರಂಭಿಸುವ ದಿನಾಂಕವನ್ನು ನಿಗದಿಪಡಿಸಿ
- ಕೇವಲ ೪-೫ ಮಕ್ಕಳಾದರೂ ಸಾಕು.
- ನಿಮ್ಮ ಮನೆಯಲ್ಲೇ ತರಗತಿಯನ್ನು ನಡೆಸಿ; ತಂದೆತಾಯಿಯರು ಸರದಿಯಂತೆ ತಮ್ಮ ಮನೆಯಲ್ಲಿ ನಡೆಸಬಹುದು. ತರಗತಿಗಳನ್ನು ಮನೆಯಿಂದ ಹೊರಗೆ, ಕ್ಲಬ್ ಹೌಸ್, ನಗರ/ಪಾರ್ಕುಗಳ ಕೋಣೆಗಳಲ್ಲಿ, ಇತ್ಯಾದಿ, ನಡೆಸುವುದು ಉತ್ತಮ.
- ತರಗತಿಯ ಸಮಯ ಮತ್ತು ಆವರ್ತನ: ಒಂದರಿಂದ ಒಂದೂವರೆ ಗಂಟೆ ಇರಲಿ, ಕನಿಷ್ಠ ಎರಡು ವಾರಕ್ಕೊಮ್ಮೆ ಇರಲಿ. ಊಟ ತಿಂಡಿಯ ಸಮಯದಿಂದ ದೂರವಿರಲಿ.
- ನಿಯತತೆ (regularity) ಮುಖ್ಯವಾದದ್ದು - ಅದೇ ಜಾಗ, ಅದೇ ಸಮಯ, ಅದೇ ಶಿಕ್ಷಕ.
- ತರಗತಿಯ ಮುಕ್ತಾಯದ ನಂತರ ಪುಟ್ಟ ತಿಂಡಿಯನ್ನು ಹಂಚಿರಿ. ತಾಟು, ಬಟ್ಟಲ, ಚಮಚ ಬೇಕಿಲ್ಲದ, ಕೈಯಲ್ಲಿ ತೆಗೆದುಕೊಂಡು ಹೋಗಬಹುದಾದ ಪುಟ್ಟ ತಿಂಡಿ ಇರಲಿ.
- ಸಾವಧಾನವಾಗಿ ಇತರ ತಂದೆ ತಾಯಿಯರನ್ನು ಶಿಕ್ಷಕರಾಗಿ, ಸಹಾಯಕರಾಗಿ ನಿಯಮಿಸಿಕೊಳ್ಳಿ
ಆ. ಕಲಿಕೆಯ (Academic)
- ಹಂತ ೧: ಕೇವಲ ಮಾತನಾಡುವುದು ಇರಲಿ (ಬರವಣಿಗೆ ಇಲ್ಲ); ಕತೆ ಹೇಳುವುದು, ಆಟ (Simon Says ತರಹ ಕನ್ನಡದಲ್ಲಿ), ಪ್ರಶ್ನೆ ಕೇಳಿ; ಪ್ರಸಂಗ,ನಟನೆ ಮಾಡುವುದು
- ಹಂತ ೨: ಬರಹ ಪರಿಚಯ. ಅಂಕಲಿಪಿ, ಕಾಪಿ ಪುಸ್ತಕ ಉಪಯೋಗಿಸಬಹುದು, ನಾಟಕ
- ಹಂತ ೩: ಓದುವುದು ಮತ್ತು ಅರಿಯುವುದು (comprehension). ಒಂದನೇ ಮತ್ತು ಎರಡನೇ ತರಗತಿ ಪಠ್ಯ ಪುಸ್ತಗಳನ್ನು ಉಪಯೋಗಿಸಬಹುದು
- ಹಂತ ೪: ನಿಬಂಧ ಬರೆಯುವುದು. ಉದ್ದ ನಾಟಕ, ಮೂರ್+ ತರಗತಿ ಪಠ್ಯ ಪುಸ್ತಕ ಉಪಯೋಗಿಸಬಹುದು.
- homework ಕೊಡಬಹುದು; ದಿನಾಲೂ ಅಥವಾ ವಾರಕ್ಕೊಮ್ಮೆ ಮಾಡುವಂತೆ ಇರಲಿ.
- ತಂದೆತಾಯಿಗಳು ಸರದಿಯಂತೆ "ನಾನೂ ನೀನೂ" ಎಂದು ಮಕ್ಕಳನ್ನು ಮಾತನಾಡಿಸುವುದು. ಮಗು ಫೋನ್ ಮಾಡಿ ೫-೧೦ ನಿಮಿಷ ಸಂಭಾಷಿಸಬೇಕು.
- ತಂತ್ರಾಂಶಗಳನ್ನು ಕಲಿಸುವುದು ಮತ್ತು ಅವುಗಳ ಮೇಲೆ ಅವಲಂಬನೆ ಬೇಡ.
- ತಕ್ಕ ಪ್ರಸಂಗ, ಹಾಡು, ನಾಟಕಗಳನ್ನು ಕಳಿಸುವುದು ಮತ್ತು ಆಡಿಸುವುದು.
ಇ. ಕಲಿಕೆಗೆ ಅತ್ಯಂತ ಪರಿಣಾಮಕಾರಿ ಸಾಧನ (Most Effective Tool)
ಅತ್ಯಂತ ಮುಖ್ಯವಾಗಿ, ತಂದೆತಾಯಿಯರು ಮನೆಯಲ್ಲಿ ಕನ್ನಡ ಮಾತನಾಡುವಂತೆ ಕೇಳಿಕೊಳ್ಳಿ. ಮಗು ತಡವರಿಸಿದರೆ ಉತ್ತೇಜಿಸಿ; ತಪ್ಪಿದರೆ ನಯವಾಗಿ ತಿದ್ದಿ. ಗದರುವುದು ಅಥವಾ ಅಸಡ್ಡೆ ಮಾಡುವುದು ಎಂದಿಗೂ ಸಲ್ಲದು. ಇಂತಹ ಪ್ರಸಂಗದಲ್ಲಿ, ಅಲ್ಲಲ್ಲಿ ಇಂಗ್ಲಿಷ್ ಪದಗಳ ಬಳಕೆ ಸರಿಯೇ. ಕನ್ನಡ ಕಲಿಸಲು, ಕನ್ನಡ ತರಗತಿಗಳಿಗಿಂತ ಹೆಚ್ಚಾಗಿ, ಇದೆ ಏಕೈಕ ಅತ್ಯಂತ ಪರಿಣಾಮಕಾರಿ ಸಾಧನ; ಅವಶ್ಯವೂ ಸುಲಭವೂ ಹೌದು.
ಈ. ಯುವಕ ಮತ್ತು ವಯಸ್ಕರಿಗೆ (Teaching for adults)
ದೊಡ್ಡವರಿಗೆ ಮತ್ತು ಆಗಲೇ ಕನ್ನಡ ಪರಿಚಯ ಇರುವವರಿಗೆ ಕಲಿಕೆಯನ್ನು ತಕ್ಕಂತೆ ಮಾರ್ಪಾಟುಗೊಳಿಸಿಕೊಳ್ಳುವುದು ಅಗತ್ಯ. ಹೆಚ್ಚು ಚಾಲೆಂಜಿಂಗ್ ವಿಷಯಗಳನ್ನು ಆರಿಸಿಕೊಳ್ಳಬೇಕು. ಸ್ವಯಂಭೋಧನೆ ನಿಯೋಜಿಸಬಹುದು. ಅವರೇ ತಮ್ಮ ಪ್ರಸಂಗ/ನಾಟಕ ಬರೆಯಲಿ..
ಕುಡಿನುಡಿಗಳು (Tips)
Kannada Kali Questions and Answers /learning/tipsforteachers/nimmamatu.html
Letter – Roopashri: https://kannadakali.com/learning/tipsforteachers/letter-roopashri.html
ಸಾಮಗ್ರಿಗಳು (Materials)
- Kannada Kali Curriculum /learning/curriculum/curriculum.html
- Make your own material like flash cards for letters, words. Excerpts from blogs, magazines, newspapers, textbooks
- Karnataka textbooksOur Karnataka Education Site only has SSLC (Class 10) textbooks. But has teacher resources, syllabus, guidelines etc. https://www.ktbs.kar.nic.in/New/index.html#!/textbook
- Department of Kannada and Culture https://kanaja.karnataka.gov.in/ebook/category/ಶಾಲಾ-ಪಠ್ಯ-ಪುಸ್ತಕಗಳು ಶಾಲಾ ಪಠ್ಯ ಪುಸ್ತಕಗಳು – Kanaja – e-book (karnataka.gov.in)
- Kannada Pradhikara
https://kannadapraadhikaara.karnataka.gov.in/info-4/Kannada+Patya
https://kannadapraadhikaara.karnataka.gov.in/info-4/Kannada+Self+Learni…
https://kannadapraadhikaara.karnataka.gov.in/info-4/KDA/kn
https://kannadapraadhikaara.karnataka.gov.in/info-4/Kannada+text+in+voc… - TN Textbooks The Kannada Textbooks from the Tamil Nadu education board site (good material): https://www.tntextbooks.in/p/school-books.html
- MH Textbooks Maharashtra textbook committee ebook library (balbharati.in)
- CBSE textbooks There's also the official CBSE/ICSE sites, that have very useful teaching material and textbooks. All CBSE texts Classes I-XII : https://ncert.nic.in/textbook.php
- ICSE/ISC textbooks https://www.ncertbooks.guru/icse-books/
- UPENN (Harold Schiffman) Spoken Kannada Lessons Harold Schiffman) http://ccat.sas.upenn.edu/plc/kannada/
___________________
ತಾಗುಲಿ : Kannada Curriculum, start and sustain Kannada School, Teach Kannada, Online resources, vishweshwar dixit