ಕನ್ನಡ ಕಲಿ ಪಠ್ಯಕ್ರಮದ ಸ್ಥೂಲ ರೂಪ ಮತ್ತು ಸಾಧನೆಯ ಹಂತಗಳು

ಕನ್ನಡ ಕಲಿಯಲು ನಾಲ್ಕು ದಳಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಕಲಿ ಅರಳಿ ಹೂವಾಗಬೇಕಾದರೆ ಎಲ್ಲ ದಳಗಳನ್ನು ಸಾಧಿಸುವುದು ಅಗತ್ಯ.


ಕನ್ನಡ ಕಲಿ ಪಠ್ಯಕ್ರಮದ ಸ್ಥೂಲ ರೂಪ ಮತ್ತು ಸಾಧನೆಯ ಹಂತಗಳು
ವಿಶ್ವೇಶ್ವರ ದೀಕ್ಷಿತ

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಕಿ ಸೊಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರೋಮಾಂಚನಗೊಳುವಾ ತನುಮನ
ಕನ್ನಡವೇ ಸತ್ಯ! ಕನ್ನಡವೇ ನಿತ್ಯ!
       - ಕುವೆಂಪು

ಕನ್ನಡ ಕಲಿಯಲು ನಾಲ್ಕು ದಳಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ.
ಕಲಿ ಅರಳಿ ಹೂವಾಗಬೇಕಾದರೆ ಎಲ್ಲ ದಳಗಳನ್ನು ಸಾಧಿಸುವುದು ಅಗತ್ಯ.

ಹಂತ

ಉಪ ಹಂತ

ಸಾಮರ್ಥ್ಯ
ದಳ: ಮಾತಿನ ಮಲ್ಲ
(ಕನ್ನಡ) ಗಿಳಿ   ವರ್ಣಮಾಲೆ, ಅಂಕಿ/ಸಂಖ್ಯೆ, ಸರಳ ವಾಕ್ಯಗಳನ್ನು ಕೇಳಿ, ಸ್ಪಷ್ಟವಾಗಿ ಪುನರುಚ್ಚರಿಸುವುದು
ಕಾಜಾಣ ಪದ ಕತೆ ಕೇಳಿ ಚಿತ್ರ ಬಿಡಿಸುವುದು; ಚಿತ್ರ ನೋಡಿ ಪದ/ಕತೆ ಹೇಳುವುದು
ಸರಳ ಕಥೆ, ಸನ್ನಿವೇಶ, ಗೀತೆಗಳನ್ನು ಆಲಿಸಿ ತಿಳಿದುಕೊಳ್ಳುವುದು; ಪ್ರಶ್ನೆಗಳಿಗೆ ಉತ್ತರಿಸುವುದು.
ಕೋಗಿಲೆ   ಪ್ರಾಸ ಗೀತೆ, ಕಥೆ/ಸಂಗತಿಯನ್ನು ಹೇಳುವುದು; ನಾಟಕ/ ಪ್ರಸಂಗ ಗಳಲ್ಲಿ ಪಾತ್ರ ವಹಿಸುವುದು; ಕವಿತೆ ಹಾಡುವುದು.
ಮಾತಿನ ಮಲ್ಲ ಚಿತ್ರ ನೋಡಿ/ನೋಡದೆ ಕತೆ ಕಟ್ಟುವುದು
ಒಬ್ಬರೊಂದಿಗೆ/ಗುಂಪಿನಲ್ಲಿ ಸಂಭಾಷಣೆ; ಪ್ರಸಂಗ ಸೃಷ್ಟಿಸಿ ನಟಿಸುವುದು
ದಳ: ಬರಹ ಬೊಮ್ಮ
ಮಲ್ಲಿಗೆ ಸ್ವರಗಳನ್ನು ಗುರುತಿಸುವುದು; ಚಿತ್ರಗಳನ್ನು ಗುರುತಿಸುವುದು
ಅಕ್ಷರಗಳನ್ನು ಗುರುತಿಸುವುದು, ಬರೆಯುವುದು, ಚಿತ್ರಗಳನ್ನು ಹೆಸರಿಸುವುದು
ಸಂಪಿಗೆ ಕಾಗುಣಿತ ಮತ್ತು ಅವುಗಳನ್ನೊಳಗೊಂಡ ಪದಗಳನ್ನು ಬರೆಯುವುದು/ಓದುವುದು/ಅರಿಯುವುದು
ಒತ್ತಕ್ಷರ ಮತ್ತು ಅವುಗಳನ್ನೊಳಗೊಂಡ ಪದಗಳನ್ನು ಬರೆಯುವುದು/ಓದುವುದು/ಅರಿಯುವುದು
ಕೇದಗಿ   ಪದ, ವಾಕ್ಯ, ಪರಿಚ್ಛೇದ ಓದು/ಬರೆಯುವುದು/ಅರಿಯುವುದು; ನಕಲಿಸುವುದು (ಕಾಪಿ ರೈಟಿಂಗ್); ಉಕ್ತಲೇಖನ
ದಳ: ಜಾಣ
ಕುಶಲ   ತಡವರಿಸದೆ ಓದುವುದು; ಬರೆಯುವುದು; ಅರಿಯುವುದು
ಚತುರ ಕಥೆ/ಸನ್ನಿವೇಶ/ಪಠ್ಯಪುಸ್ತಕದ ಪಾಠ ಓದಿ, ವಿವಿಧ ಪ್ರಶ್ನೆಗಳಿಗೆ  - ಉತ್ತರ ಕೊಡುವುದು
ಉತ್ತರ ಬರೆಯುವುದು
ನಿಪುಣ   ಕತೆ/ಕವಿತೆ ಒದಿ ಬೇರೆಯವರಿಗೆ ಸ್ವಂತ ವಾಕ್ಯಗಳಲ್ಲಿ ಹೇಳುವುದು
ಜಾಣ   ಸ್ವಂತ ಚಿಕ್ಕ ಕತೆ/ನಿಬಂಧ/ಪ್ರಾಸ ಗೀತೆ ಬರೆಯುವುದು
ದಳ: ಕೋವಿದ
ಪ್ರವೀಣ   ವ್ಯಾಕರಣದ ತಿಳುವಳಿಕೆ; ಪಠ್ಯದಲ್ಲಿನ (ಪದ, ವಾಕ್ಯ,ವ್ಯಾಕರಣ) ತಪ್ಪುಗಳನ್ನು ಕಂಡು ಹಿಡಿಯುವುದು, ತಿದ್ದುವುದು
ಪ್ರೌಢ   ಕತೆ, ನಿಬಂಧ, ಕವಿತೆ ಬರೆಯುವುದು
ವಿಶಾರದ   ಒಂದು ವಿಷಯವನ್ನು ಅಧ್ಯಯನ ಮಾಡಿ ಮಂಡಿಸುವುದು; ಇತರರೊಡನೆ/ಗುಂಪಿನಲ್ಲಿ ಚರ್ಚಿಸುವುದು
ಕೋವಿದ   ಕನ್ನಡ ಮತ್ತು ಕರ್ನಾಟಕದ ಸಂಸ್ಕೃತಿ, ಸಾಹಿತ್ಯ, ಇತಿಹಾಸ, ಇತರ ಮಾಹಿತಿ ತಿಳಿದಿರುವುದು; ಭಾಷಣ, ಪ್ರೆಸೆಂಟೇಷನ್ ಮಾಡುವುದು.

ತಾಗುಲಿ : Curriculum, vishweshwar dixit

This is really fascinating, You are a very professional blogger.
I have joined your rss feded and look ahead to searching for more of your magnificent post.

Additionally, I've shared your site in my social
networks