ಈಗಿನ ತತ್ತ್ವವಿದ್ಯಾಭ್ಯಾಸಕ್ಕೆ ಕೆಲವು "ರೋಮಾಂಚಕ ದಿಗಂತಗಳು”
“ಬ್ರಹ್ಮ ಮೀಮಾಂಸೆ”, “ಸಾಯುಜ್ಯಮುಕ್ತಿ”, “ಪರವಿದ್ಯೆ” ವಿಧದ ಶಬ್ದಾಡಂಬರದಿಂದಲೂ, “ಆಧಿದೈವಿಕ-ಆಧ್ಯಾತ್ಮಿಕ” “ಅಂಬರ”ದಿಂದಲೂ, ಈ ನಮ್ಮ ಭೌತಿಕ-ಜೈವಿಕ-ಮಾನವಿಕ “ಧರೆ”ಗಿಳಿದು, ಜೀರ್ಣ-ಸಂಕುಚಿತ-ಸಾಂಪ್ರದಾಯಿಕ ಮತಗಳ ಅಂಕೆಗಳನ್ನು ಹಾಯ್ದು, ಜ್ಞಾನದ ಎಲ್ಲೆಗಳನ್ನು ದಂಗಾಗಿಸುವಂತೆ ದೌಡಾಯಿಸಿ ದೂಡುತ್ತಿರುವ ವಿಜ್ಞಾನವನ್ನು ಸಂಗಾತಿಯಾಗಿಸಿಕೊಂಡು, ಇಹಲೌಕಿಕ, ಜೀವಂತ-ಜ್ವಲಂತ ಸಮಸ್ಯೆಗಳಿಗೆ ಮಿಡಿಯುವಂತೆಯೂ, ಸಮಾಜದ ತಳಮಟ್ಟವನ್ನು ಮುಟ್ಟುವಂತೆಯೂ, ಸಮಷ್ಟಿಯನ್ನೇ ತಬ್ಬಿಕೊಳ್ಳುವಂತೆಯೂ, ನಿಮ್ಮ ಮುಕ್ತ-ಉದಾತ್ತ ಆಲೋಚನೆಗಳು ಹೊಮ್ಮಿ ಹರಿಯಲಿ!
