ಪಾಬ್ಲೊ ನೆರುದಾ ರ ಕವನ .........
ಈ ಸಂಜೆ, ಗಂಟೆ ಗಂಟೆಗೂ ಚಿಗುರುವುದು ಮುಂಚೆ;
ಒಂದೊಂದು ಕದಿರು, ಒಂದೊಂದು ನೆರಳು,
ಒಂದೊಂದು ಮುಚ್ಚಂಜೆ, ಸೂಸುವುದು ನಮಗೆ ಹೊಸತು;
ಮತ್ತೆ ಅದೆ
ಈ ಸಂಜೆ, ಗಂಟೆ ಗಂಟೆಗೂ ಚಿಗುರುವುದು ಮುಂಚೆ;
ಒಂದೊಂದು ಕದಿರು, ಒಂದೊಂದು ನೆರಳು,
ಒಂದೊಂದು ಮುಚ್ಚಂಜೆ, ಸೂಸುವುದು ನಮಗೆ ಹೊಸತು;
ಅಚಲ ಕಾಲ
ಮುಸುಕುವುದು
ತನ್ನ ಅನಿವಾರ್ಯ ಮೊಗವ,
ಬದಲಾಗದೆಯೆ ಬದಲಿಸುವುದುಡುಗೆಯನು;
ಇರುಳಿರುಳು ನಸು ಬೆಳಗಿನಲಿ
ಹಿಮಬಂಡೆಗಳ ದೀರ್ಘ ಮೌನ;
ಬೇಸಿಗೆಯ ಕೆಂಗೊಳುವ ಸೇಬು;
ಎಲ್ಲವೂ ಗಾಳಿಯಂತೆ ಸಂಚಾರಿ, ಭಂಗುರ;
ಕಾಯುವುದು ಕಾಲ ನಿಶ್ಚಲ,
ನಿರ್ವರ್ಣ, ನಿರುಷ್ಣ, ನಿರರ್ಕ, ತಾರಾವಿಹೀನ;
ಆಳುವುದು ಇದೆ ನಿರಂಕುಶತ್ವ ನಮ್ಮನ್ನು.
ನಮೋ ನಮೋ! ಮತ್ತದೆ, ಬದಲಿಸದು ಏನನ್ನೂ.
-- ಪಾಬ್ಲೊ ನೆರುದಾ
(ಕನ್ನಡಕ್ಕೆ ವಿಶ್ವೇಶ್ವರ ದೀಕ್ಷಿತ)
ತಾಗುಲಿ : Pablo Neruda, vishweshwar dixit, ನಿರಂಕುಶತ್ವ