ಟಕಟಕ ಜೋಕು, ಇನ್ನೂ ಬೇಕು !
ನಾಕ್-ನಾಕು ಜೋಕು, ಬೇಕೇ ಬೇಕು !
Kannada Knock-knock Jokes
¾ ವಿಶ್ವೇಶ್ವರ ದೀಕ್ಷಿತ
ಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ. ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಲ್ಲವು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ಇನ್ನೂ ಇತ್ಯರ್ಥವಾಗಿಲ್ಲ! [ಹೆಚ್ಚಿನ ಮಾಹಿತಿಗೆ: ಕೆಳಗೆ ನಮೂದಿಸಿರುವ ನ್ಯಾಶನಲ್ ಪಬ್ಲಿಕ್ ರೇಡಿಯೋದ ಲೇಖನವನ್ನು ಓದಿ.
[https://www.npr.org/sections/npr-history-dept/2015/03/03/389865887/the-…]
ಕನ್ನಡದಲ್ಲಿ ಇವು ಮೊದಲ ನಾಕ್-ನಾಕು ಜೋಕುಗಳು ಎನ್ನಬಹುದು. ಓದಿ ನಲಿಯಿರಿ. ಇಂಥ ಅಥವ ಬೇರೆ ತರಹದ ನಾಕು ನಾಕ್-ನಾಕು ಜೋಕುಗಳನ್ನು ನೀವೂ ರಚಿಸಿ, ಕಾಮೆಂಟು ಹಾಕಿರಿ. ಮಾದರಿ ಜೋಕುಗಳು ಬೇಕಾಗಿದ್ದರೆ, "knock-knock Jokes" ಅಂತ ಗೂಗಲಿಸಿದರೆ ಸಾವಿರಾರು ಜೋಕುಗಳು ಸಿಗುತ್ತವೆ [https://www.google.com/search?q=knock+knock+jokes]
ಎಚ್ಚರಿಕೆ! ನಾಕು-ನಾಕು ಜೋಕುಗಳನ್ನು ಬೇರೆ ಭಾಷೆಯಿಂದ ಕಾಪಿ ಹೊಡೆಯಲು ಸಾಧ್ಯವಿಲ್ಲ! ಕೆಳಗಿನವುಗಳನ್ನು ಮಾದರಿಯಾಗಿ ಇಟ್ಟುಕೊಂಡು ಸ್ವಂತ ಟಕ-ಟಕ ಯಾ ಕಟ-ಕಟ ಜೋಕುಗಳನ್ನು ಕಟ್ಟಿರಿ ಯಾ ಕುಟ್ಟಿರಿ.
ಇಲ್ಲಿನ ಕೆಲವು ಜೋಕುಗಳು, ಕನ್ನಡ ಕಲಿ ಮ್ಯಗ್ಝೀನ್ ಸಂಪುಟ ೧, ಸಂಚಿಕೆ ೨, ಜೂನ್ ೨೦೦೬, ಪುಟ ೫ರಲ್ಲಿ ಪ್ರಕಟವಾಗಿದ್ದವು [https://www.scribd.com/doc/36032085/V01I02-Kannada-Kali-ಕನ-ನಡ-ಕಲಿ-June-…])
ಕಂತು ೧
ಟಕ-ಟಕ, ಟಕ್
ಯಾರು ಅಲ್ಲಿ?
ಮಂಗಲಾ.
ಮಂಗಲಾ ಯಾರು?
ಲಾಯರು ನಾನು, ಮಂಗ ನೀನು. ಲಗೂನ ತಗೀ ಬಾಗಿಲ!
ಟಕ-ಟಕ, ಟಕ್
ಯಾರು ಅದು?
ಸುಮ ನಾ
ಸುಮನಾ ಯಾರು?
ಸುಮ ನಾ; ನೀ ಯಾರು ನನಗೇನು ಗೊತ್ತು?
ಟಕ-ಟಕ, ಟಕ್
ಯಾರು ಅಲ್ಲಿ?
ನಾಥ.
ನಾತ ಯಾರು?
ತಯಾರು ಇದ್ರೆ ಬಾಗಿಲ ತೆಗೆದು ಮೂಸು.
ಟಕ-ಟಕ, ಟಕ್
ಯಾರು ಅದು?
ಉಪ್ಪು ಕಾರ.
ಉಪ್ಪು ಕಾರ ಯಾರು?
ಉಪಕಾರ ಮಾಡಿ ಬಾಗಿಲ ತೆಗೀಯೆ ಮಾರಾಯತಿ!
ಟಕ-ಟಕ, ಟಕ್
ಯಾರು ಅದು?
ಮಾಲು.
ಯಾರು ಮಾಲು?
ತಲೆಗೆ ಸುತ್ತಿಕೊಳ್ಳುವುದು.
ಟಕ-ಟಕ, ಟಕ್
ಯಾರು ಅಲ್ಲಿ?
ಕುಮಾಯಿ.
ಯಾರು ಕುಮಾಯಿ?
ಪಂಢರಪುರದ ವಿಠ್ಠಲ ರುಕುಮಾಯಿ!
ಟಕ-ಟಕ, ಟಕ್
ಯಾರು ಅಲ್ಲಿ?
ಪೈ.
ಯಾರು ಪೈ?
ಲಕ ಲಕ ಹೊಳೀತಿರೋ ಬೆಳ್ಳೀ ಪೈ.
ಟಕ-ಟಕ, ಟಕ್
ಯಾರು ಅದು?
ಜಿನ.
ಯಾರು ಜಿನ?
ಬರಬಾರದ ರೋಗ ರುಜಿನ.
ಕಂತು ೨
ಟಕ-ಟಕ, ಟಕ್
ಯಾರು ಅಲ್ಲಿ?
ದ್ರಾಕ್ಷಿ.
ಯಾರು ದ್ರಾಕ್ಷಿ?
ಕೊಳ್ಳಾಗಿನ ರುದ್ರಾಕ್ಷಿ ಸರ!
ಟಕ-ಟಕ, ಟಕ್
ಯಾರು ಅದು?
ಮಾರಿ.
ಯಾ ಮಾರಿ?
ಸೈಬರ್ ಕಳ್ಳಿ!
ಟಕ-ಟಕ, ಟಕ್
ಯಾರು ಅಲ್ಲಿ?
ಒತ್ತು.
ಯಾ ಒತ್ತು?
ಯಾವತ್ತು ಆದರೆ ಏನು? ಇವತ್ತೇ!
ಟಕ-ಟಕ, ಟಕ್
ಯಾರು ಅದು?
ದನ.
ಯಾರೋ ದನ?
ಅಳುತ್ತ ಕೂತಿರೋ ರೋದನ!
ಟಕ-ಟಕ, ಟಕ್
ಯಾರು ಅದು?
ಮಿನಿ.
ಯಾ ಮಿನಿ?
ರಾತ್ರಿ ಬರುವವಳು!
ಟಕ-ಟಕ, ಟಕ್
ಯಾರು ಅಲ್ಲಿ?
ಮತ್ತ.
ಮತ್ ಯಾರು?
ಮತ್ಯಾರು? ನಾನೇ!!
ಟಕ-ಟಕ, ಟಕ್
ಯಾರು ಅದು?
ಹತ್ತ.
ಹತ್ ಯಾರು?
ಹೌದು, ಹತ್ಯಾರು, ಇರೀತೀನಿ ಹುಷಾರು!!
ಟಕ-ಟಕ, ಟಕ್
ಯಾರು ಅದು?
ನಾ.
ನಾ ಯಾರು?
ನಾಯರು, ನಾ ಗೋವಿಂದ ನಾಯರು, ನೀ ಯಾರು?
ಕನ್ನಡಕಲಿ, ಬಿತ್ತರಿಕೆ, ಸಪ್ಟಂಬರ ೨೭, ೨೦೨೪
Kannada Kali Bittarike September 27, 2024
ಟಕಟಕ ಜೋಕು : ಇನ್ನೂ ಬೇಕು
ನಾಕ್-ನಾಕು ಜೋಕು : ಬೇಕೇ ಬೇಕು
ಜೋಕು ನಿರೂಪಕರು: ಗಗನ ಗೂಗ್ಲೆ ಮತ್ತು ಸಪ್ನಾ ಗೂಗ್ಲೆ
ತಾಗುಲಿ knock-knock Jokes
ಏನಂತೀರಿ?