ಕಲಕಿದ ನೀರು

ಕಲಕಿದ ನೀರು 

ವಿಶ್ವೇಶ್ವರ ದೀಕ್ಷಿತ

೧೯೮೬ರಲ್ಲಿ ಬರೆದ ಈ ಕವನ ಅಮೆರಿಕನ್ನಡ ಸಂಚಿಕೆ ೧೫ರಲ್ಲಿ ಪ್ರಕಟವಾಗಿತ್ತು.

ಇಂದಿನ ಕೊರೋನ ಮಾರಿ, ಹಣದ ಉಬ್ಬರ ಅಬ್ಬರ, ಹಸಿವೆಯ ಕೊರೆತ,  ಮಾರುಕಟ್ಟೆಯ ಕುಸಿತ, ವಾಣಿಜ್ಯ ವಸಾಹತುಗಳು, ಕಲಹ ಯುದ್ಧಗಳು ಮತ್ತು  (ಬದುಕಿ ಉಳಿದರೆ) ಅವುಗಳ ಭೀತಿಯಲ್ಲಿ  ಬಾಳು, ಈ ಕವನವನ್ನು ನೆನಪಿಗೆ ತಂದವು, ಮತ್ತೆ. ಕಾಲ ಕಳೆದರೂ, ಮುಂದುವರೆದಂತೆಯೂ, ಪರಿಸ್ಥಿತಿ ಹೊಸತು ಆದರೂ ಭಯ ಭೀತಿಗಳೇ ಮನುಷ್ಯನ ಭವ ಭೂತಿ, ಇರವಿನ ಅರಿವು ಎನ್ನುವ ಸಂಶಯ ಬಾರದೆ ಇರದು.

ನಾನಾರು

ನಾನಾರು

ಆದಿ ಶಂಕರ ವಿರಚಿತ ಆತ್ಮಷಟ್ಕ (ನಿರ್ವಾಣ ಷಟ್ಕ)

ಕನ್ನಡಕ್ಕೆ  : ವಿಶ್ವೇಶ್ವರ ದೀಕ್ಷಿತ

 

ಗಾಂಧಿ ನಾಮದ ಬಲ

"ಹೆಸರಿನಲ್ಲೇನಿದೆ?" ಎಂದು ವಾದಿಸುವವರಿಗೆ "ಗಾಂಧಿ" ಎಂಬ ಒಂದೇ ಒಂದು ಪದ ಹೇಳಿದರೆ ಸಾಕು, ಸುಮ್ಮನಾಗುತ್ತಾರೆ. ಅಷ್ಟು ಅದರ ಮಹತ್ವ. ಗಾಂಧಿ ಎಂದು ಹೆಸರಿಟ್ಟುಕೊಂಡು, ಆ ಹೆಸರಿನಲ್ಲಿ ಏನೆಲ್ಲವನ್ನು ಸಾಧಿಸಬಹದು - ವಿಶೇಷವಾಗಿ ಸ್ವಾತಂತ್ರ್ಯಾನಂತರದಲ್ಲಿ. ಇದು ಹೇಗಾಯಿತು? ಗಾಂಧಿ ನಾಮದ ಚರಿತ್ರೆ ಏನು? ಮತ್ತಿತರ ಕುತೂಹಲಕಾರಿ ಮಾಹಿತಿಗಳನ್ನು ಹೆಕ್ಕಿ ನಿಮ್ಮ ಮುಂದೆ ಇಟ್ಟಿದ್ದಾರೆ ಮೈಸೂರಿನ ಶ್ರೀ ಸೀತಾರಾಮ್

ಅಸ್ಥಿರವಾಗುತ್ತಿರುವ ಕುಟುಂಬ ವ್ಯವಸ್ಥೆ

ದೇಶ ಅಭಿವೃದ್ಧಿ ಆದಂತೆ, ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆ ಶಿಥಿಲವಾಗಿ ಹಲವು ಸಂಪ್ರದಾಯಗಳು ಮೊಟಕುಗೊಂಡರೆ ಇನ್ನು ಕೆಲವು ಸಂಪೂರ‍್ಣ ಮಾಯವಾಗುವವು.  ಇದು ಅನಿವಾರ್ಯವೆ? ಸಂಪ್ರದಾಯಗಳ ಉದ್ದೇಶಗಳನ್ನು ಅರಿತು ಮೂಲಭೂತ ಅಂಶಗಳನ್ನು ಉಳಿಸಿಕೊಂಡು, ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವೆ? ಈ ನಿಟ್ಟಿನಲ್ಲಿ, ಇಂಥ ಪರಿಸ್ಥಿತಿಗೆ ನಾವು ಬಂದು ಮುಟ್ಟಿರುವ ಕಾರಣಗಳನ್ನು ಕೆದಕಿ ನೋಡುವುದು ಅವಶ್ಯ.