ಕನ್ನಡ ಕಲಿ ದಿನ ೨೦೦೬


ಕನ್ನಡ ಕಲಿ ದಿನ ೨೦

*** ವಿಶ್ವೇಶ್ವರ ದೀಕ್ಷಿತ   (ಚಿತ್ರಗಳು: ವೆಂಕಟೇಶ ಚಕ್ರವರ್ತಿ)
ಕನ್ನಡ ಕಲಿ ದಿನ ೨೦೦೬ ನ್ನು ಕಳೆದ ಅಕ್ಟೊಬರ ೨೯ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನಡ ಕಲಿ ಅಧ್ಯಾಯದಲ್ಲಿ ಇದು ಮತ್ತೊಂದು ಮಹತ್ವದ ಮೈಲಿಗಲ್ಲು. ಎಲ್ಲ ಕನ್ನಡ ಕಲಿ ಮಕ್ಕಳು ಒಂದಾಗಿ ತಮ್ಮ ಕನ್ನಡತನವನ್ನು ಮೆರೆದರು. ಇದರೊಂದಿಗೆ ಸರಸ್ವತಿ ಪೂಜೆ ಮತ್ತು ಶಿಕ್ಷಕರ ದಿನಗಳನ್ನೂ ಆಚರಿಸಲಾಯಿತು.

 


ವಿವಾರ ಅಕ್ಟೋಬರ್ ೨೯, ೨೦೦೬ ಕನ್ನಡ ಕಲಿ ಪಥದಲ್ಲಿ ಒಂದು ಮಹತ್ವದ ದಿನ. ದಕ್ಷಿಣ ಕ್ಯಲಿಫೋರ್ನಿಯದ ಎಲ್ಲ ಕನ್ನಡ ಕಲಿ ಅಧ್ಯಾಯಗಳು ಒಂದೆ ಸೂರಿನಡಿ ನೆರೆದು ಕನ್ನಡ ಉಲಿಯನ್ನು ಮೊಳಗಿದರು. ಇದೊಂದು ಕನ್ನಡ ಮಕ್ಕಳ ಸಮ್ಮೇಳನ. ವರ್ಷವಿಡಿ ತಮ್ಮ ತರಗತಿಗಳಲ್ಲಿ  ಕಲಿತದ್ದನ್ನು ವಿವಿಧ ಕಾರ್ಯಕ್ರಮಗಳಲ್ಲಿ ಬಿಂಬಿಸಿದರು. ತಂದೆ ತಾಯಿಗಳು ಮತ್ತು ಶಿಕ್ಷಕರು ತಮ್ಮ ಪ್ರಯತ್ನದ ಸಫಲತೆಯನ್ನು ಇಲ್ಲಿ ಕಂಡು ಹೆಮ್ಮೆಯಿಂದ ಬೀಗಿದರು. ಇದಲ್ಲದೆ, ಶಿಕ್ಷಕರ ದಿನ, ಸರಸ್ವತಿ ಪೂಜೆ, ಮತ್ತೆ ಕರ್ನಾಟಕದ ಹುಟ್ಟು ದಿನಗಳನ್ನೂ ಆಚರಿಸಲಾಯಿತು. ಅರ್ವೈನ್ ಮಂದಿರದ ಭಾರತೀಯ ಸಮುದಾಯ ಕೇಂದ್ರದಲ್ಲಿ ಸುಮಾರು ೫೫ ಮಕ್ಕಳು ಈ ದಿನದ ಕಾರ್ಯಕ್ರಮಗಳನ್ನು ನೀಡಿದರು. ಜ್ಞಾನದೇವತೆ ಸರಸ್ವತಿಯನ್ನು ನೆನೆದು ಕನ್ನಡಾಂಬೆಯನ್ನು ಕೊಂಡಾಡಿದರು.
ರಂಗದ ಮೇಲೆ ಎಲ್ಲ ಮಕ್ಕಳೂ ಶಿಸ್ತಿನಿಂದ ನಿಂತು ಮಾಡಿದ ಸಾಮೂಹಿಕ ಗಾಯನ ಎಲ್ಲರ ಮನ ಮುಟ್ಟಿತು.

ನಂತರ ಸುರು ಆಯ್ತು ನೋಡಿ, ಒಂದು ನಿಮಿಷದ ಚುರುಕು ಭಾಷಣಗಳು! ಆಯ್ದ ವಿಷಯಗಳ ಮೇಲೆ ಸ್ಪಷ್ಟ ಕನ್ನಡದಲ್ಲಿ ಮಾತನಾಡಿ ನಿಮಿಷದಲ್ಲೆ ಮಿಂಚಿದರು. ಮನರಂಜನೀಯ ನಾಟಕ, ನೃತ್ಯ, ಮತ್ತು ಪ್ರಹಸನಗಳು ಮುಂದುವರೆದವು. 'ನುಡಿದುಂಬಿ' ಲಿಖಿತ ಮತ್ತು ಮೌಖಿಕ ಭಾಗಗಳು ಜನಪ್ರಿಯವಾದವು. ಮಕ್ಕಳಿಗೆ ಕನ್ನಡ ಕಲಿಸಲು ಇದೊಂದು ಉತ್ತಮ ತಂತ್ರ ದೊರೆತಂತಾಯಿತು.

ನಿಸ್ಪೃಹತೆಯಿಂದ ದುಡಿಯುತ್ತಿರುವ ಶಿಕ್ಷಕರು ಮತ್ತು ಸಹಯೋಜಕರನ್ನು ಗೌರವಿಸಲಾಯಿತು. ಮಕ್ಕಳಿಗೆ ಪಾರಿತೋಷಕಗಳೊಂದಿಗೆ ಕನ್ನಡ ಪುಸ್ತಕಗಳನ್ನು ಹಂಚಲಾಯಿತು. ಮತ್ತೆ ಸಾಮೂಹಿಕ ಗಾಯನದಲ್ಲಿ 'ಭಾರತ ಜನನಿಯ ತನುಜಾತೆ'ಯನ್ನು ನುತಿಸುತ್ತ ಅರ್ವೈನ್ ಅತಿಥೇಯರು ಬಡಿಸಿದ ರುಚಿಕರ ಊಟದೊಂದಿಗೆ ಈ ದಿನಕ್ಕೆ ಒಲ್ಲದ ಮನಸ್ಸಿನಿಂದ ತೆರೆ ಎಳೆಯಲಾಯಿತು.
 
 

ಈ ದಿನದ ಹೊಣೆಯನ್ನು ಹೊತ್ತು ಯಶಸ್ವಿಯಾಗಿ ನಿರ್ವಹಿsಸಿದ ಕನ್ನಡ ಕಲಿ ಅರ್ವೈನ್ ಪಾಲಕರಿಗೆ ಮತ್ತು ಅವರೊಡನೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ಕೃತಜ್ಞತೆಗಳು; ತಿಂಗಳಿಂದ  ಅವಿರತ ದುಡಿದ ಎಲ್ಲ ಕನ್ನಡ ಕಲಿ ಸಹಯೋಜಕರಿಗೂ, ಕಾರ್ಯಕ್ರಮಗಳ ನಿರ್ವಾಹಕರಿಗೂ, ಮತ್ತು ಪ್ರೋತ್ಸಾಹಿಸಿದ ತಂದೆ ತಾಯಿಗಳಿಗೂ ಈ ದಿನದ ಯಶಸ್ಸಿನಲ್ಲಿ ಪಾಲು. ಮೇಲಾಗಿ ಸಕ್ರಿಯವಾಗಿ ಸಹಕರಿಸಿ, ಸಹಾಯ ನೀಡಿ, ಪ್ರೋತ್ಸಾಹಿಸುತ್ತಿರುವ ಕರ್ನಾಟಕ ಸಾಂಸ್ಕೃತಿಕ ಸಂಘಕ್ಕೆ ಕನ್ನಡ ಕಲಿಯ ನಮನಗಳು.

ಭಾಗವಹಿಸುತ್ತಿರುವ ಶಾಖೆಗಳು
ಇರ್ವೈನ್:
  Principal: Pratibha Bhagwat
 
Coordinator: Geetha Nirand
  Number of Students: 24

ಸೆರಿಟೋಸ್:
  Principal/Coordinator: Arathi Maganti
  Number of Students: 14

ವ್ಯಾಲಿ:
  Principal: Mythili Ramakrishna
  Coordinator: Arun Madhav 
  Number of Students: 24

ಡೈಮಂಡ್ ಬಾರ್ ‍‍‍ ಚೀನೊ ಹಿಲ್ಸ್
  Coordinator: Vijay Kotrappa
  Number of Students:
3
ಪಾಮ್ ಡೇಲ್ 
  Principal/Coordinator: Kris Venkatappa

ಕಾರ್ಯಮದ ಚಿತ್ರಗಳಿಗಾಗಿ ವೆಂಕಟೇಶ ಚಕ್ರವರ್ತಿ ಅವರ ಗ್ಯಾಲರಿಗೆ ಈ ಕೊಂಡಿ ಕ್ಲಿಕ್ಕಿಸಿ:
http://venkatesh.smugmug.com/Art/Children/Kannada-Kali-Annual-Day-2006/2086480_gEeGz#107634958_LLqTZ