ಕನ್ನಡ ಕಲಿ ದಿನ ೨೦೦೬ ಒಂದು ನಿಮಿಷದ ಚುರುಕು ಭಾಷಣಗಳು


ಒಂದು ನಿಮಿಷದ ಚುರುಕು ಭಾಷಣಗಳು

ಕನ್ನಡ ಕಲಿ ದಿನ ೨೦೦೬ ರ ಸಂದರ್ಭದಲ್ಲಿ  ಮಕ್ಕಳು ಆಯ್ದ ವಿಷಯಗಳ ಮೇಲೆ ಸ್ಪಷ್ಟ ಕನ್ನಡದಲ್ಲಿ ಮಾತನಾಡಿ ನಿಮಿಷದಲ್ಲೆ ಮಿಂಚಿದರು.  ಇಲ್ಲಿವೆ ಎರಡು ಭಾಷಣಗಳು.


ಕರ್ನಾಟಕ    
ಪ್ರಣತಿ ವೆಂಕಟೇಶ, ಕನ್ನಡ ಕಲಿ, ವ್ಯಾಲಿ
ಕರ್ನಾಟಕ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದು. ಕರ್ನಾಟಕದ ರಾಜಧಾನಿ ಬೆಂಗಳೂರು. ಕರ್ನಾಟಕದ ರಾಜ್ಯಭಾಷೆ ಕನ್ನಡ. ಕರ್ನಾಟಕದ ಪ್ರಮುಖ ನಗರಗಳು ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ, ಮತ್ತು ಬೆಳಗಾಂವಿ. ಕರ್ನಾಟಕದ ಐತಿಹಾಸಿಕ ಪ್ರದೇಶಗಳು ಹಂಪಿ, ಬೇಲೂರು, ಹಳೆ ಬೀಡು, ಮತ್ತು ಬಿಜಾಪುರ. ಇದು ನಮ್ಮ ಸುಂದರ ಕರ್ನಾಟಕ.

ಲವ-ಕುಶ 
ಲಹರಿ ಕಂಕರ, ೮ ವರ್ಷ, ಕನ್ನಡ ಕಲಿ, ವ್ಯಾಲಿ
ನನಗೆ ಇಷ್ಟವಾದ ಚಿತ್ರ ಲವ ಕುಶ. ಲವ ಕುಶ ರಾಮ ಸೀತಾ ಅವರ ಮಕ್ಕಳು. ರಾಮನು ಸೀತಾ ಅವರನ್ನು ಕಾಡಿಗೆ ಕಳಿಸಿದರು. ಅಲ್ಲಿ ವಾಲ್ಮೀಕಿ ಆಶ್ರಮದಲ್ಲಿ ಲವ ಕುಶ ಹುಟ್ಟಿದರು.
ಲವ ಕುಶ ಅಶ್ವಮೇಧ ಯಜ್ಞದ ಕುದುರೆಯನ್ನು ಹಿಡಿದು ಕಟ್ಟಿದರು. ಆಮೇಲೆ ಭಯವಿಲ್ಲದೆ ರಾಮನ ಜೊತೆ ಯುಧ್ಧ ಮಾಡಿದರು.


ತಾಗುಲಿ : kannada kali day, quick speech, pranati venkatesh, lava kusha, lahari kankar