ಫ್ಯಾಮಿಲೀಸ್ ಫಾರ್‌ವಾರ್ಡ್‍ಗೆ ಬೆನ್‌ಚೀಲಗಳು

ಫ್ಯಾಮಿಲೀಸ್ ಫಾರ್‌ವಾರ್ಡ್ ಗೆ ಬೆನ್‌ಚೀಲಗಳು

ಸಪ್ಟಂಬರ 2007


ಈ ಬೇಸಿಗೆ ರಜೆಯಲ್ಲಿ ಕನ್ನಡ ಕಲಿ, ಅರ್ವೈನ್ ಮಕ್ಕಳು ಒಂದು ಒಳ್ಳೆಯ ಕೆಲಸ ಮಾಡಿದರು. ದುರಾದೃಷ್ಟದಿಂದ ಮನೆ ಇಲ್ಲದವರಾಗಿ ತೊಳಲುತ್ತಿರುವ ಕುಟುಂಬಗಳ ಶಾಲಾ ಮಕ್ಕಳಿಗೆ ಕನ್ನಡ ಕಲಿ, ಅರ್ವೈನ್ ಮಕ್ಕಳು ೫೦ ತುಂಬಿದ ಬೆನ್‌ಚೀಲಗಳನ್ನು (ಬ್ಯಾಕ್‌ಪ್ಯಾಕ್) ಇವರಿಗೆ ವಿತರಿಸುವ ಗುರಿ ಹಾಕಿಕೊಂಡರು.  ತಮ್ಮ ಎಲ್ಲ ಸ್ನೇಹಿತರಿಗೆ, ತಂದೆತಾಯಿಗಳಿಗೆ ಇ-ಮೇಲ್ ಫೋನ್ ಮುಖಾಂತರ ಸಹಾಯ ನೀಡುವಂತೆ ಕೇಳಿಕೊಂಡರು. ಹಲವರು ಹಣ ಕೊಟ್ಟರೆ ಕೆಲವರು ೨-೩ ಬೆನ್‌ಚೀಲಗಳನ್ನು ತುಂಬಿ ಕೊಡುವುದಾಗಿ ಒಪ್ಪಿಕೊಂಡರು. ಎಷ್ಟು ಹಣ ಸಂಗ್ರಹ ಆಗಬಹುದು ಎಂದು ಒಂದು ಅಂದಾಜು ಸಿಕ್ಕ ತಕ್ಷಣ ವಸ್ತುಗಳನ್ನು ಖರೀದಿಸುವ ತಯಾರಿ ನಡೆಸಿದರು. ಎಲ್ಲ ವೃತ್ತ ಪತ್ರಿಕೆ ಮತ್ತು ಅಂಗಡಿಗಳ ಜಾಲತಾಣಗಳನ್ನು ಶೋಧಿಸಿ ಒಳ್ಳೆಯ ಡೀಲ್‌ಗಳನ್ನು ಕಂಡು ಹಿಡಿದರು. ಮಕ್ಕಳು ತಮ್ಮ ಉದ್ದೇಶ ಹೇಳಿದ್ದಕ್ಕೆ ಹಲವು ಅಂಗಡಿಗಳು ಇನ್ನಷ್ಟು ರಿಯಾಯಿತಿ ಕೊಟ್ಟರು.

ಬೆನ್‌ಚೀಲ, ಪುಸ್ತಕ, ಪೆನ್ನು, ಪೆನ್ಸಿಲ್, ರಬ್ಬರು, ಇಂಚುಪಟ್ಟಿ, ಸೂಚಿಪತ್ರ, ಹಾಳೆ, ಹಾಳೆಗಳಿಗೆ ಫೋಲ್ಡರ್, ಬೈಂಡರ್, ಕೈಗಣಕ (ಕ್ಯಾಲ್ಕುಲೇಟರ್ ) ಕಂಪಾಸ್, ಇತ್ಯಾದಿಗಳನ್ನು ಖರೀದಿಸಿ ಬೆನ್‌ಚೀಲಗಳನ್ನು ತುಂಬಿಸಿದರು.
ಫ್ಯಾಮಿಲೀಸ್ ಫಾರ್‌ವಾರ್ಡ್ ಕಚೇರಿಗೆ ಎಲ್ಲ ಮಕ್ಕಳು ಭೇಟಿ ಇತ್ತು ತುಂಬಿದ 35+ ಬೆನ್‌ಚೀಲಗಳನ್ನು ಒಪ್ಪಿಸಿದರು.
 

ಈ ಕಾರ್ಯದಿಂದ ಮಕ್ಕಳಿಗೆ ಆದ ಅನುಭವ:
 - ಇಲ್ಲದವರಿಗೆ ಕೊಡುವುದು
 - ಉದ್ದೇಶಕ್ಕೆ ತಕ್ಕಂತೆ ಯೋಜನೆ ಹಾಕಿಕೊಳ್ಳುವುದು
 - ತಾವು ಇರುವ ಸಮುದಾಯ/ಊರಿನಲ್ಲಿಯೆ ಸಹಾಯ ನೀಡುವುದು
 - ತಮಗೆ ಇದ್ದುದನ್ನು ಕಂಡು ತಮ್ಮ ಅದೃಷ್ಟಕ್ಕೆ ಧನ್ಯತೆ ತೋರುವುದು
 

ಬೇಸಿಗೆಯ ರಜ ಬೇಸರವಿಲ್ಲದೆ ಕಳೆದು ಮಕ್ಕಳಿಗೆ ವಿಶೇಷ ತೃಪ್ತಿ ತಂದಿತ್ತು.
ಕಾರ್ಯಕ್ರಮವನ್ನು ಯೋಜಿಸಿ ಪೂರ್ತಿಗೊಳಿಸಿದ ಮಕ್ಕಳು ಚಿರಾಗ, ನಿಹಾಲ, ಅಂಕುಶ, ಅನೀಶ, ಆಕಾಶ, ಪ್ರಣತಿ, ಶರದ್, ದಿಶಾ, ಶಾಲಿನಿ, ಮಧುಲಿಕಾ, ಸಾತ್ವಿಕ, ಪ್ರೇರಣಾ, ಮಾಯಾ, ಮತ್ತು ಪಾರ್ಥ ಇವರಿಗೆ ಕನ್ನಡ ಕಲಿಯ ಅಭಿನಂದನೆಗಳು; ಎಲ್ಲ ರೀತಿಯಿಂದ ಸಹಾಯ ಮಾಡಿದ ಎಲ್ಲರಿಗು ಧನ್ಯವಾದಗಳು.
 

ತಾಗುಲಿ