ಕನ್ನಡ ಕಲಿ ದಿನ ೨೦೦೯


ಕನ್ನಡ ಕಲಿ ದಿನ ೨೦೦೯

ಕನ್ನಡ ಕಲಿ, ಮಕ್ಕಳಿಗೆ ಕನ್ನಡದಲ್ಲಿ ಮಾತನಾಡಲು, ಓದಲು, ಮತ್ತು, ಬರೆಯಲು ಕಲಿಸುವುದನ್ನೆ ಮುಖ್ಯ ಉದ್ದೇಶವನ್ನಾಗಿಟ್ಟು ಕೊಂಡಿರುವ ಸಂಸ್ಥೆ. ಇಲ್ಲಿ, ಕರ್ನಾಟಕದ ಸಂಸ್ಕೃತಿಯ ಬಗ್ಗೆ ಕೂಡ ಕಲಿಸಲಾಗುವುದು. ಕನ್ನಡ ಕಲಿ ಸಂಸ್ಥೆಯು ತನ್ನ ಹಲವು ಶಾಖೆಗಳ ಮೂಲಕ ಈ ಭಾಗದಲ್ಲಿರುವ ಕನ್ನಡ ಬಂಧುಗಳಿಗೆ ಸೇವೆ ಮಾಡುತ್ತಿದೆ.
ಕನ್ನಡ ಕಲಿ ದಿನಾಚರಣೆ ವರ್ಷಕ್ಕೊಮ್ಮೆ ನಡೆಯುವ, ಎಲ್ಲಾ ಕನ್ನಡ ಕಲಿ ಶಾಖೆಗಳ ಮಕ್ಕಳ ಕನ್ನಡ ಜ್ಞಾನ, ಪ್ರತಿಭೆಯನ್ನು ಪ್ರದರ್ಶಿಸುವ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ೨೦೦೬ ರಿಂದ ನಡೆಸಲಾಗುತ್ತಿದೆ.


*** ವಿಶ್ವೇಶ್ವರ ದೀಕ್ಷಿತ

ಆಹ್ವಾನ‌
ರವಿವಾರ ಮಾರ್ಚ್ ೨೨, ೨೦೦೯
ಕ್ಷಿಣ ಕ್ಯಾಲಿಫೋರ್ನಿಯದ ಎಲ್ಲ ಅಧ್ಯಾಯಗಳ ಕನ್ನಡಕಲಿಗಳು ಪ್ರತಿ ವರ್ಷದಂತೆ ಒಂದೆಡೆ ಸೇರಿ ಮತ್ತೆ ಸಂಭ್ರಮಿಸಲಿದ್ದಾರೆ. ಕನ್ನಡ ಕಲಿ ದಿನಾಚರಣೆ ಮಾರ್ಚ್ ೨೨ರಂದು ಸರಿಟೊ ಅಧ್ಯಾಯದ ಮುಂದಾಳುತ್ವದಲ್ಲಿ ಲಿಬರ್ಟಿ ಪಾರ್ಕಿನ ಸಮುದಾಯ ಭವನದಲ್ಲಿ ನಡೆಯಲಿದೆ. ಪರಸ್ಪರ ವಿಚಾರ ವಿನಿಮಯ, ಕನ್ನಡ ಕಲಿಗಳಿಗೆ ಪರೀಕ್ಷೆ, ವಿನೋದಭರಿತ ಕ್ವಿಝ್, ಮಕ್ಕಳಿಂದ ಮನರಂಜನೆ, ಪ್ರಶಸ್ತಿ ಪ್ರದಾನ, ನಿಸ್ಪೃಹ ಸೇವೆ ಗೈಯುತ್ತಿರುವ ಶಿಕ್ಷಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಇವೆ. ಕನ್ನಡ ಕಲಿತು ಹೆಮ್ಮೆಯಿಂದ ತೋರಿಸಿಕೊಳ್ಳುತ್ತಿರುವ ಮಕ್ಕಳನ್ನು ಪ್ರೋತ್ಸಾಹಿಸ ಬನ್ನಿ. ಇದರಲ್ಲಿ ಭಾಗವಹಿಸುತ್ತಿರುವ ೬೦ಕ್ಕೂ ಹೆಚ್ಚು ಮಕ್ಕಳಿಗೆ ಶುಭ ಕೋರಿ ಹಾರೈಸೋಣ. ತಪ್ಪದೆ ಬನ್ನಿ. ಬರಲಾಗದಿದ್ದರೆ ಸಂದೇಶ ಕಳುಹಿಸಿ: ಶಾಂತಾರಾಮ ಕೇಶವ (೫೬೨)೭೮೭-೩೨೫೮ shatnaram_keshava at yahoo.com ಅಥವ kannadakali at yahoo.com.

ಭಾಗವಹಿಸುತ್ತಿರುವ ಶಾಖೆಗಳು

ವ್ಯಾಲಿ:
  Coordinator: Shivakumar Gowder 
  Contact:Arun Madhav
  Number of Students: 24

ಇರ್ವೈನ್:
  Coordinator: Geetha Nirand
  Contact: Vish Dixit
  Contact: Pratibha Bhagwat
   Number of Students: 24

ಸೆರಿಟೋಸ್:
  Coordinator: Shantharam Keshava
   Contact: Satish
   Number of Students: 14

 


ತಾಗುಲಿ : kannada kali day 2009

ವರದಿ
ಬಕುಳ ಮಂದಾರ ಪಾದರಿ ಕರ್ಣಿಕಾರ ಚಂ|
ಪಕ ಕೋವಿದಾರ ಪ್ರಿಯಂಗು ಕರವೀರ ಕುರ|
ವಕ ತಿಲಕ ಸುರಗಿ ನಂದ್ಯಾವರ್ತ ಮೇರು ಸೇವಂತಿಗೆ ಶಿರೀಷಮೆಂಬ||
[ಲಕ್ಷ್ಮೀಶ]
ಸಕಲ ಕನ್ನಡ ಕಲಿಕೆಗಳೊಮ್ಮೆಲೆಯಲರ್ದು|
ಚಕಿತ ಜನಸಂಕುಲಕೆ ತೆಂಕ ನಾಡಿನುದ್ದಗ|
ಲಕೆ ಬೀರಿದವು ಸಿರಿ ಕನ್ನಡದ ಹಿರಿ ಸಂಸ್ಕೃತಿಯ ನರುಗಂಪನು ||

ಈ ರೀತಿ ದಕ್ಷಿಣ ಕ್ಯಲಿಫೋರ್ನಿಯದ ಎಲ್ಲ ಅಧ್ಯಾಯಗಳ ಕನ್ನಡಕಲಿಗಳು ಪ್ರತಿ ವರ್ಷದಂತೆ ಒಂದೆಡೆ ಸೇರಿ ಮತ್ತೆ ಸಂಭ್ರಮಿಸಿದರು. ಈ ಕನ್ನಡ ಮೊಗ್ಗುಗಳು ಬಿರಿದು ತಮ್ಮ ಕಂಪನ್ನು ಹರಡಿದವು. ಕನ್ನಡ ಕಲಿ ದಿನಾಚರಣೆ ಮಾರ್ಚ್ ೨೨, ೨೦೦೯ ರಂದು ಸರಿಟೊ ಅಧ್ಯಾಯದ ಮುಂದಾಳುತ್ವದಲ್ಲಿ ಲಿಬರ್ಟಿ ಪಾರ್ಕಿನ ಸಮುದಾಯ ಭವನದಲ್ಲಿ ಜರುಗಿತು.

ಅಕ್ಷರಮಲ್ಲ, ಪದಮಲ್ಲ, ಜಾಣ, ಪ್ರವೀಣ ಇತ್ಯಾದಿ ವಿವಿಧ ಹಂತಗಳಲ್ಲಿ ಪರೀಕ್ಷೆಯನ್ನು ಕನ್ನಡ ಕಲಿಗಳಿಗೆ ಮೊದಲೆ ನೀಡಲಾಗಿತ್ತು. ಗಣೇಶನ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯ್ತು. ಮಕ್ಕಳು ಶಾಲೆಯಲ್ಲಿ ಕಲಿತುದನ್ನು ನಾಟಕ ಪ್ರಹಸನ ಹಾಡುಗಳ ಮೂಲಕ ಪ್ರದರ್ಶಿಸಿದರು. ವಿನೋದಭರಿತ ರಸಪ್ರಶ್ನೆಗಳು ಎಲ್ಲರಿಗು ಚಾಲೆಂಜ್ ಒಡ್ಡಿ ಮಾಹಿತಿಯನ್ನೂ ಒದಗಿಸಿತು.

ಪರೀಕ್ಷೆ ಬರೆದವರಿಗೆ ಪ್ರಮಾಣ ಪತ್ರ, ರಸಪ್ರಶ್ನೆಯಲ್ಲಿ ಗೆದ್ದವರಿಗೆ ಬಹುಮಾನ. ನಿಸ್ಪೃಹ ಸೇವೆ ಗೈಯುತ್ತಿರುವ ೧೬ ಶಿಕ್ಷಕರಿಗೆ ಸನ್ಮಾನ. ಅಮೆರಿಕದ ಸಾಹಿತಿ ನಾಗ ಐತಾಳ್‌ರ ಒಂದಾನೊಂದು ಕಾಲದಲ್ಲಿ ಪುಸ್ತಕವನ್ನು ಪರಿಚಯಿಸಿ ಗೌರವಿಸಲಾಯಿತು.

ಕನ್ನಡ ಕೂಟದ ನವನಿರ್ದೇಶಕರು ಕೂಡಿ ನೆರೆದಿದ್ದ ೧೫೫ ಜನರು ಕನ್ನಡ ಕಲಿಯಲ್ಲಿ ಭಾಗವಹಿಸುತ್ತಿರುವ ಅರವತ್ತಕ್ಕೂ ಹೆಚ್ಚು ಮಕ್ಕಳಿಗೆ ಶುಭ ಕೋರಿದರು. `ಜಯ ಭಾರತ ಜನನಿಯ' ವೃಂದಗಾನದೊಂದಿಗೆ ಕಾರ್ಯಕ್ರಮ ಮುಗಿಸಿ ಹೊಸ ಹುರುಪಿನೊಂದಿಗೆ ಮನೆಗೆ ತೆರಳಿದರು.

ಭಾಗವಹಿಸಿದ ಎಲ್ಲರಿಗೂ ಅಭಿನಂದನಗಳು; ಧನಸಹಾಯ ಮಾಡಿದ ದಾನಿಗಳಿಗೆ ಕೃತಜ್ಞತೆಗಳು; ಶಾಂತಾರಾಮ ಕೇಶವ ಅವರ ಜೊತೆ ತಿಂಗಳಿಂದ ಅವಿರತ ದುಡಿದ ಸರಿಟೊ ಕನ್ನಡ ಕಲಿಯ ಪಾಲಕರಿಗೆ ನಮ್ಮ ಅನಂತ ನಮನಗಳು.

ಕಾರ್ಯಮದ ಚಿತ್ರಗಳಿಗಾಗಿ ವೆಂಕಟೇಶ ಚಕ್ರವರ್ತಿ ಅವರ ಗ್ಯಾಲರಿಗೆ ಈ ಕೊಂಡಿ ಕ್ಲಿಕ್ಕಿಸಿ:
hhttp://venkatesh.smugmug.com/gallery/8437340_jC5Na#554446308_vnrNH-A-LB