Culture

ಅವನತಿಯತ್ತ ಭಾವನಾತ್ಮಕ ಸಂಬಂಧ : ಯಾಂತ್ರಿಕವಾಗುತ್ತಿರುವ ದೀಪಾವಳಿ ಆಚರಣೆ

[ಇಂದು, ಸಮಾಜ ಬೆಳಕಿನ ವೇಗದಲ್ಲಿ ಬದಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ಹಬ್ಬಗಳ ಆಚರಣೆಗಳೂ ಬದಲಾಗುವುದು ಸಹಜ. ಆದರೆ ಭಾವನಾತ್ಮಕ ಬೆಸುಗೆಗಳು ಶಿಥಿಲವಾಗಿ, ಮಾನವೀಯ ಸಂಬಂಧಗಳು ಕಳಚುತ್ತ, ದೇಶವೇ ಒಂದು ದೊಡ್ಡ ವ್ಯವಹಾರವಾಗುತ್ತಿದೆ.  ಮುಂದಿನ ದಿನಗಳಲ್ಲಿ ಹಬ್ಬದ ಆಚರಣೆ ಸಂಪೂರ್ಣ ಯಾಂತ್ರಿಕವಾಗುವುದರಲ್ಲಿ ಅನುಮಾನ ಇಲ್ಲ. ಇದಕ್ಕೆ ಕಾರಣಗಳು ಏನು?   ಹಾಗಾಗದಂತೆ ನೋಡಿಕೊಳ್ಳುವ ಜವಾಬುದಾರಿ ಯಾರದು?] 

ಗಾಂಧಿ - ಜೀವನ

ಕೆಟಲ್ ಪದದ ಸ್ಪೆಲಿಂಗ್ ಬಾರದು; ಪಕ್ಕದ ಹುಡುಗನಿಂದ ಕಾಪಿ ಹೊಡೆಯುವಂತೆ ಶಿಕ್ಷಕರು ಸನ್ನೆ ಮಾಡುತ್ತಾರೆ; ಆದರೆ ಮೋಹನದಾಸ್ ತನಗೆ ಬಂದಂತೆ ತಪ್ಪಾಗಿ ಬರೆಯುತ್ತಾನೆ. ಈ ಪ್ರಾಮಾಣಿಕ ಮೂರ್ತಿಯ ಮೇಲೆ ಶಿಕ್ಷಕರಿಗೆ ಎಲ್ಲಿಲ್ಲದ ಸಿಟ್ಟು. ಆವರಿಗೇನು ಗೊತ್ತು ಕರಮಚಂದರ ಮಗ ಈ ಮೋಹನದಾಸ ಮುಂದೆ ಮಹಾತ್ಮ ಗಾಂಧಿ ಆಗುತ್ತಾನೆ ಎಂದು! 

ಸಂಸ್ಕೃತಿ ಮತ್ತು ತನ್ನತನಗಳಿಗೆ ತಾಯ್ನುಡಿಯೆ ಮೂಲ

 

ವ್ಯವಹಾರ, ಪ್ರಯಾಣ, ಶಾಲೆ, ಮತ್ತಿತ್ತರ ನಿತ್ಯ ಅವಶ್ಯಕತೆಗಳಿಗೆ ಒಂದೆ ಭಾಷೆಯ ಮೇಲಿನ ನಮ್ಮ ಅವಲಂಬನ ಎಷ್ಟಿದೆಯೆಂದರೆ ಬೇರೆ ಭಾಷೆಗಳ ಪರಿಚಯ ಕೂಡ ಅಪ್ರಾಸಂಗಿಕ ಎನಿಸುತ್ತದೆ. ನಾನೇಕೆ ಕನ್ನಡ ಕಲಿಯಬೇಕು? ಕರ್ನಾಟಕದಲ್ಲೂ  ಇಂಗ್ಲಿಷ್ ಮಾತಾಡುತ್ತಾರಲ್ಲ! ಸುಮ್ಮನೆ ವೇಳೆ ಹಾಳಲ್ಲವೆ?