ಕನ್ನಡ ಕಲಿ ದಿನ ೨೦೦೮


ಕನ್ನಡ ಕಲಿ ದಿನ ೨೦೦೮

*** ವಿಶ್ವೇಶ್ವರ ದೀಕ್ಷಿತ   (ಚಿತ್ರಗಳು: ವೆಂಕಟೇಶ ಚಕ್ರವರ್ತಿ)

ಮತ್ತೊಮ್ಮೆ ಕನ್ನಡ ಕಲಿ ಮಕ್ಕಳೆಲ್ಲ ಒಂದೆ ಸೂರಿನಡಿ ನೆರೆದು ವಿಜೃಂಭಿಸಲಿದ್ದಾರೆ. ದಕ್ಷಿಣ ಕ್ಯಲಿಫೊರ್ನಿಯದ ಕನ್ನಡ ಕಲಿ ಅಧ್ಯಾಯಗಳು ಸೇರಿ ಕನ್ನಡ ಕಲಿ ದಿನ ಆಚರಿಸುತ್ತಿವೆ. ಕನ್ನಡ ಕಲಿ, ವ್ಯಾಲಿಯ ಮುಂದಾಳುತನದಲ್ಲಿ ಜರುಗಲಿರುವ ಈ ಸಮ್ಮಿಲನ ಹೊಸ ಸ್ಫೂರ್ತಿಯನ್ನು ತುಂಬುವುದರಲ್ಲಿ ಸಂಶಯವಿಲ್ಲ.


ಆಹ್ವಾನ‌
ದಿನ: ಶನಿವಾರ ಮಾರ್ಚ ೨೯, ೨೦೦೮, ಮಧಾಹ್ನ ೨:೦೦ ರಿಂದ
ಸ್ಥಳ: ಮ್ಯಾಲಿಬು ಹಿಂದು ದೇವಾಲಯ,
    ೧೬೦೦ ಲಾಸ್ ವರ್ಜಿನಸ್ ಕ್ಯನಿಯನ್ ರೋಡ್,
    ಕ್ಯಲಬಾಸಸ್, ಕ್ಯ. ೯೧೩೦೨

ಕ್ಷಿಣ ಕ್ಯಾಲಿಫೋರ್ನಿಯದ ಕನ್ನಡ ಕಲಿ ಮಕ್ಕಳೆಲ್ಲ ಮತ್ತೊಮ್ಮೆ ಒಂದೆ ಸೂರಿನಡಿ ನೆರೆದು ವಿಜೃಂಭಿಸಲಿದ್ದಾರೆ. ದಕ್ಷಿಣ ಕ್ಯಲಿಫೊರ್ನಿಯದ ಕನ್ನಡ ಕಲಿ ಅಧ್ಯಾಯಗಳು ಸೇರಿ ಕನ್ನಡ ಕಲಿ ದಿನ ಆಚರಿಸುತ್ತಿವೆ. ಕನ್ನಡ ಕಲಿ, ವ್ಯಾಲಿಯ ಮುಂದಾಳುತನದಲ್ಲಿ ಜರುಗಲಿರುವ ಈ ಸಮ್ಮಿಲನ ಹೊಸ ಸ್ಫೂರ್ತಿಯನ್ನು ತುಂಬುವುದರಲ್ಲಿ ಸಂಶಯವಿಲ್ಲ. ವರ್ಷವಿಡಿ ತರಗತಿಗಳಲ್ಲಿ ಕಲಿತದ್ದನ್ನು ತೋರಿಸಿ ಮಿಂಚುವ ಅವಕಾಶ ಮಕ್ಕಳಿಗೆ:  ಕನ್ನಡ ದುಂಬಿ,  ಮಲ್ಲ, ಜಾಣ, ಕನ್ನಡ ಪ್ರವೀಣ ಇತ್ಯಾದಿ ಹಂತಗಳಲ್ಲಿ ವಿವಿಧ ಸ್ಪರ್ಧೆಗಳು; ಕನ್ನಡ ಸಂಭಾಷಣೆ, ರಸಪ್ರಶ್ನೆ; ಕಲಿತ ಪದ್ಯಗಳನ್ನು ಹಾಡುವುದು; ಕಿರು ನಾಟಕಗಳು; ಕನ್ನಡ ಮನರಂಜನೆ. ತಂದೆತಾಯಿ ಮತ್ತು ಶಿಕ್ಷಕರಲ್ಲಿ ವಿಚಾರ ವಿನಿಮಯ. ಕೊನೆಯಲ್ಲಿ ಆಹ್ವಾನಿತ ಖ್ಯಾತ ಕಲಾವಿದೆ ಲಕ್ಷ್ಮಿ ಚಂದ್ರಶೇಖರ ಅವರಿಂದ ಏಕಪಾತ್ರಾಭಿನಯ ಇದೆ. ಸರಸ್ವತಿ ಪೂಜೆಯೊಂದಿಗೆ ಆರಂಭವಾಗುವ ಈ ಕಾರ್ಯಕ್ರಮ ವೃಂದಗಾನದ ನಂತರ ಭೂರಿ ಭೋಜನದೊಂದಿಗೆ ಮುಗಿಯಲಿದೆ. ಎಲ್ಲರಿಗೂ ಸ್ವಾಗತ. ಬನ್ನಿ, ಭುವನೇಶ್ವರಿಯ ಸಮೇತ ಕನ್ನಡ ತೇರನ್ನು ಸಿಂಗರಿಸಿ ಎಳೆಯೋಣ.

ಹೆಚ್ಚಿನ ಮಾಹಿತಿಗಾಗಿ:
   ಅರುಣ್ ಮಾಧವ್ ೮೦೫-೪೬೯-೮೮೮೪;
   ಶಿವ ಗೌಡರ್     ೯೧೮-೯೧೭-೭೯೯೬
   (ಎಲ್.ಎ.ಕೌಂಟಿ) ಶಾಂತಾರಾಮ shantharam_keshav at yahoo.com
   (ಆರೆಂಜ್ ಕೌಂಟಿ) ಗೀತಾ ನಿರಂದ ೯೪೯-೩೮೭-೭೨೭೭

ಭಾಗವಹಿಸುತ್ತಿರುವ ಶಾಖೆಗಳು

ವ್ಯಾಲಿ:
  Coordinator: Arun Madhav
  Contact: Shivakumar Gowder
  Number of Students: 23

ಇರ್ವೈನ್:
  Coordinator: Geetha Nirand
  Contact: Vish Dixit
  Contact: Pratibha Bhagwat
   Number of Students: 26

ಸೆರಿಟೋಸ್:
  Coordinator: Shantharam Keshav
   Contact: Satish
   Number of Students: 16

ಡೈಮಂಡ್ ಬಾರ್-ಚಿನೋ ಹಿಲ್ಸ್:
   Contact: Veena Krishna
   Number of Students: 3

 

ವರದಿ
ಕನ್ನಡ ಕಲಿಗಳ ಮಲ್ಲಯುದ್ಧ
ಸ್ಥಿರಲಕ್ಷ್ಯ ಕೂರ್‌ಮತಿ ಸಾಧ
ಕರಮೋಘವಾಕ್‌ಚ ತುರರೋದುಬರೆಪಗಳೊಳತಿ |
ಹುರುಪಿನ ಮಲ್ಲರ್ ಜಾಣರ್
ಪರಿಣತಿ ಯುದ್ಧಂ ಗೆಯ್ದರ್ ಕನ್ನಡ ಕಲಿಗಳ್ ||

ಶನಿವಾರ ಮಾರ್ಚ ೨೯ ರಂದು ದಕ್ಷಿಣ ಕ್ಯಲಿಫೊರ್ನಿಯದಲ್ಲಿ ಕನ್ನಡ ಕಹಳೆ ಅನುರಣಿಸಿತು. ಮಾಲಿಬು ದೇವಸ್ಥಾನದ ಅಂಗಳದಲ್ಲಿ ಕನ್ನಡ ಜಾತ್ರೆ. ಹಲವು ಕನ್ನಡ ಕಲಿ ತರಗತಿಗಳಲ್ಲಿ ವರುಷಗಳಿಂದ ತರಬೇತಿ ಪಡೆಯುತ್ತಿದ್ದ ಮಕ್ಕಳೆಲ್ಲ ನೆರೆದಿದ್ದಾರೆ. ವಿವಿಧ ಹಂತ ಮತ್ತು ವಿಭಾಗಗಳಲ್ಲಿ ಮೇಲಾಟ ನಡೆಸಿ ತಮ್ಮ ಕನ್ನಡತನವನ್ನು ಮೆರೆದಿದ್ದಾರೆ. ಸ್ವರ ದುಂಬಿಗಳು ಗುಂಜನಿಸಿದರು; ವ್ಯಂಜನ ಮಲ್ಲರು ಕಾದಿದರು; ಜಾಣ ಪ್ರವೀಣರು ಸೆಣಸಿದರು. ಕನ್ನಡ ರಸಪ್ರಶ್ನೆ ಎಲ್ಲರನ್ನೂ ಕೆಣಕಿತ್ತು. ನೃತ್ಯಗಳು ಮನರಂಜಿಸಿದರೆ ಕಿರು ನಾಟಕಗಳು ಮನೋಜ್ಞವಾದವು.  ಆಹ್ವಾನಿತ ಖ್ಯಾತ ಕಲಾವಿದೆ ಲಕ್ಷ್ಮಿ ಚಂದ್ರಶೇಖರ ಅವರ ಏಕಪಾತ್ರಾಭಿನಯ ಅದ್ಭುತವಾಗಿತ್ತು.

ಕನ್ನಡ ಕಲಿ ವ್ಯಾಲಿಯ ಉತ್ಸಾಹಿಗಳು ಬಹಳ ಸೃಜಶೀಲತೆಯಿಂದ ಸಮರ್ಥವಾಗಿ ಆಯೋಜಿಸಿದ ಕನ್ನಡ ಕಲಿ ದಿನ ಇದಾಗಿತ್ತು. ಮಕ್ಕಳು ಸೇರಿದಂತೆ ಒಂದು ನೂರ ಐವತ್ತಕ್ಕು ಹೆಚ್ಚು ಜನ ಸೇರಿ, ಏಕಕಾಲಕ್ಕೆ ಅನೇಕ ಚಟುವಟಿಕೆಗಳು ನಡೆದ ಇದು ಒಂದು ಮಿನಿ ಕನ್ನಡ ಕಲಿ ಸಮ್ಮೇಳನವೆ ಆಗಿತ್ತು.   ಈ ಸಂದರ್ಭದಲ್ಲಿ ಕನ್ನಡ ಕಲಿಗಾಗಿ ಶ್ರಮಿಸುತ್ತಿರುವ ವಿಶ್ವೇಶ್ವರ ದೀಕ್ಷಿತ, ಕನ್ನಡ ಕಲಿಗಳಿಗೆ ಸ್ಫೂರ್ತಿ ನೀಡುತ್ತಿರುವ ಹಿರಿಯ ಶಿಕ್ಷಕಿ ಶ್ರೀಮತಿ ಮೈಥಿಲಿ ರಾಮಕೃಷ್ಣ, ಮತ್ತು ಎಲ್ಲ ಅಧ್ಯಾಯಗಳ ಶಿಕ್ಷಕರನ್ನು ಸಮ್ಮಾನಿಸಲಾಯಿತು. ಸರಸ್ವತಿ ಪೂಜೆಯೊಂದಿಗೆ ಆರಂಭವಾದ ಈ ದಿನ ರಾಷ್ಟ್ರಕವಿ ಶಿವರುದ್ರಪ್ಪನವರ ಕವನಗಳ ವೃಂದಗಾನದಲ್ಲಿ ಕೊನೆಗೊಂಡಿತು.

ಕಾರ್ಯಮದ ಚಿತ್ರಗಳಿಗಾಗಿ ವೆಂಕಟೇಶ ಚಕ್ರವರ್ತಿ ಅವರ ಗ್ಯಾಲರಿಗೆ ಈ ಕೊಂಡಿ ಕ್ಲಿಕ್ಕಿಸಿ:
http://venkatesh.smugmug.com/Art/Children/Kannada-Kali-2008/4622693_kMDqR#272736880_zzN2L-A-LB


ತಾಗುಲಿ : kannada kali day, lakshmi chandrashekhar