Language

ಬರವಣಿಗೆಯಲ್ಲಿ ಮತ್ತು ಉಚ್ಚಾರದಲ್ಲಿ ಭಾಷಾ ಶುದ್ಧಿಯ ವಿಚಾರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಕೆ.ಟಿ. ಗಟ್ಟಿ ಚಿಂತನಶೀಲ ಬರಹಗಾರರು. ಭಾಷೆಯ ಕಲಿಕೆ, ಉಳಿವು, ಅಳಿವು, ಮತ್ತು ಬೆಳವಣಿಗೆಗಳಲ್ಲಿ ಇವರಿಗೆ ಆಸಕ್ತಿ. ಕನ್ನಡ ಕಲಿಗಾಗಿ ಬರೆದ ಈ ವಿಶೇಷ ಲೇಖನದಲ್ಲಿ ೧೧ ವಿಚಾರಗಳನ್ನು ಹರವಿದ್ದಾರೆ. ‘ನುರಿತ’ ಬರಹಗಾರರೂ ಸಾಮಾನ್ಯವಾಗಿ ಎಸಗುವ ಈ ಅನೇಕ ಪ್ರಮಾದಗಳನ್ನು ಕನ್ನಡ ಕಲಿಗಳು ಗಮನಿಸುವುದು ಅವಶ್ಯ. ನಿಮ್ಮ ವಿಚಾರ ೧೧ಏನು ತಿಳಿಸಿ

ಭಾಷೆ, ಲಿಪಿ, ಮತ್ತು ಕಲಿಕೆ – ಒಂದು ವಿಶ್ಲೇಷಣೆ

ಭಾಷೆ ಅಂದರೇನು? ಮಾತಾಡುವುದೊ? ಬರೆಯುವುದೊ? ನುಡಿಯೊ? ಲಿಪಿಯೊ? ಪದ ವಾಕ್ಯಗಳೋ? ಅರ್ಥವೋ? ಇವಾವೂ ಅಲ್ಲದ ಅಮೂರ್ತ ಸಂವಹನವೋ?
 
ಇಬ್ಬರ ನಡುವೆ ಭಾಷೆ ಬೇಕು. ಗಣಿತ, ವಿಜ್ಞಾನ, ಕಲೆ – ಯಾವುದಕ್ಕೂ ಭಾಷೆ ಬೇಕು. ಆಲೋಚಿಸಲೂ ಭಾಷೆ ಬೇಕು! ಅಂತೂ ಇದು ಮನುಷ್ಯನ ಬದುಕಿಗೆ, ಬಾಳಿಗೆ, ಉನ್ನತಿಗೆ ಅವಶ್ಯವಾದದ್ದು. ಹಾಗಾದರೆ ಭಾಷೆಯನ್ನು ಕಲಿಯುವುದು ಹೇಗೆ? ಒಂದು ಭಾಷೆಯನ್ನು ಕಲಿಯಲು ಮಾಧ್ಯಮವಾಗಿ ಇನ್ನೊಂದು ಭಾಷೆ ಅಗತ್ಯವೆ? ಸೂಕ್ತವಾದ ಮಾಧ್ಯಮ ಭಾಷೆ ಯಾವುದು? 

ಕನ್ನಡ ಮತ್ತು ವಿಜ್ಞಾನದ ಕಲಿಕೆ

[ಈ ಬಿತ್ತರಿಕೆಯಲ್ಲಿ ಕನ್ನಡ ಮತ್ತು ವಿಜ್ಞಾನ, ವಿಜ್ಞಾನ ಬರವಣಿಗೆ, ಕನ್ನಡದಲ್ಲಿ ವಿಜ್ಞಾನ ಬರೆಹದ ಸ್ಥಿತಿ ಈ ಅಂಶಗಳಣ್ನು ನಿಮ್ಮ ಗಮನಕ್ಕೆ ತಂದು, ವಿಜ್ಞಾನ ಕಲಿಕೆಗೆ ಕೆಲವು ಸೂಚನೆಗಳನ್ನು ನೀಡಲು ಪ್ರಯತ್ನಿಸಿದ್ದೇನೆ. ‌ ಎಂದಿನಂತೆ, ನಿಮ್ಮ ಕಮೆಂಟು, ಪ್ರಶ್ನೆ, ನಿರ್ಭಿಡೆಯ ಟೀಕೆಗಳಿಗೆ ಸ್ವಾಗತ.]

(ಇ + ಅ)ಷ್ಟು = ಎಷ್ಟು? ಮೂಲ ಸಂಸ್ಕೃತವೋ ಕನ್ನಡವೋ?

ಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ
ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು ಎಂದಾದರೆ, [ಅ।ಇ।ಎ]ಷ್ಟು ಪದಗಳ ಹುಟ್ಟು ಹೇಗೆ? ಕಿಟ್ಟೆಲ್ ಕೋಶದಲ್ಲಿ ೧೨ನೆ  ಶತಮಾನದ ಶಬ್ದಮಣಿದರ್ಪಣ ಮತ್ತು ಬಸವಪುರಾಣಗಳನ್ನು ಉಲ್ಲೇಖಿಸಲಾಗಿದೆ.   ಆದರೆ, ಕವಿರಾಜ ಮಾರ್ಗ, ಪಂಪ, ಮತ್ತು ರನ್ನರಲ್ಲಿ ಈ ಪದಗಳ ಪ್ರಯೋಗ ನನಗೆ ಕಾಣಲಿಲ್ಲ. ಇದಕ್ಕೆ ಏನಾದರೂ  ಸುಲಭ ವಿವರಣೆ ಇದ್ದರೆ ನನಗೆ ಹೊಳೆಯುತ್ತಿಲ್ಲ. 

ಉಗಾದಿಯೂ ಯುಗಾದಿಯೆ?

ಯುಗಾದಿಯಿಂದ ಉಗಾದಿ ಬಂತೆ? ಉಗಾದಿಗೆ ಒಂದು ಸ್ವತಂತ್ರ ಹುಟ್ಟು ಇದೆಯೆ? ಭಾಷೆ ಬೆಳೆಯುವುದದಾದರೂ ಹೇಗೆ?
... ಸಾಯಂಕಾಲದ ಮಳೆ ಕಾಯ್ದ ರಸ್ತೆಯ ಮೇಲೆ ರಪರಪನೆ ಬಿದ್ದಾಗ, ಹೆಬೆ ಎದ್ದು, ದೂಳಿನ ಕಂಪನ್ನು ಮೂಗು ಹಿಗ್ಗಿಸುತ್ತ ಸವಿಯಲು  ಕಾಯದವರು ಯಾರಿದ್ದಾರೆ! ಆ ದಿನದ ಆಗಮನವನ್ನು ಸಾರುವುದೇ ಉಗಾದಿ!

ಭಾಷೆಯ ಕಲಿಕೆ

ಒಂದು ಹೊಸ ಭಾಷೆ ಕಲಿಯಲು ಅಥವಾ ಕಲಿಸಲು ಯಾವ ದಾರಿ ಉತ್ತಮ? ನಿಗದಿತವಾಗಿ ಪೂರ್ವಾಯೋಜಿತವಾದ 'ಪಾಠ'ಗಳ ಮೂಲಕ ವ್ಯವಸ್ಥಿತವಾಗಿ (organized, formal, step-by- step method) ಕಲಿಯು(ಸು)ವುದೋ? ಇಲ್ಲವೇ ಅನಿಶ್ಚಿತವಾಗಿ ಅಲ್ಲಲ್ಲಿ ಪ್ರಯೋಗದಲ್ಲಿ ಕಂಡುಬರುವ ಅಂಶಗಳನ್ನು ಬಂದಬಂದ ಹಾಗೆ ಅಳವಡಿಸಿಕೊಳ್ಳುತ್ತ ಕಲಿಯು(ಸು)ವುದು (random, ad-hoc method) ವಾಸಿಯೋ? ಯಾವ ವಿಧಾನ ಹೆಚ್ಚು  ಪರಿಣಾಮಕಾರಿ?