ಕನ್ನಡ ಮತ್ತು ವಿಜ್ಞಾನದ ಕಲಿಕೆ

[ಈ ಬಿತ್ತರಿಕೆಯಲ್ಲಿ ಕನ್ನಡ ಮತ್ತು ವಿಜ್ಞಾನ, ವಿಜ್ಞಾನ ಬರವಣಿಗೆ, ಕನ್ನಡದಲ್ಲಿ ವಿಜ್ಞಾನ ಬರೆಹದ ಸ್ಥಿತಿ ಈ ಅಂಶಗಳಣ್ನು ನಿಮ್ಮ ಗಮನಕ್ಕೆ ತಂದು, ವಿಜ್ಞಾನ ಕಲಿಕೆಗೆ ಕೆಲವು ಸೂಚನೆಗಳನ್ನು ನೀಡಲು ಪ್ರಯತ್ನಿಸಿದ್ದೇನೆ. ‌ ಎಂದಿನಂತೆ, ನಿಮ್ಮ ಕಮೆಂಟು, ಪ್ರಶ್ನೆ, ನಿರ್ಭಿಡೆಯ ಟೀಕೆಗಳಿಗೆ ಸ್ವಾಗತ.]

ಕಲೆಯ ಕಲಿಕೆ - ಇಂದಿಗೆ ಬೇಕೇ?

"ಶಾಸ್ತ್ರೀಯ ಕಲೆಗಳು ಕಲಿಯಲು ಕಷ್ಟ, ಕೆಲವರಿಗಷ್ಟೇ ಸೀಮಿತ, ಈಗಿನ ತಂತ್ರಜ್ಞಾನದ ಯುಗದಲ್ಲಿ ಕೆಲಸಕ್ಕೆ ಬಾರದ್ದು; ಶಾಸ್ತ್ರೀಯ ಸಂಗೀತ ನೃತ್ಯಗಳನ್ನು ನೋಡೋರು ಯಾರು? ಕಲಿಯಲು ಸಮಯ ಎಲ್ಲಿದೆ?"  ಈ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕರವಾಗಿ  ಉತ್ತರಿಸಿದ್ದಾರೆ;  ಕಲೆ ನಮ್ಮ ಬದುಕು, ಅನಿವಾರ್ಯ; ಕಲಿಕೆ ಅವಶ್ಯ ಮತ್ತು ಕರ್ತವ್ಯ ಎಂದು ತೋರಿಸಿ ಕೊಟ್ಟಿದ್ದಾರೆ ಸಂಗೀತ-ನೃತ್ಯ ಕಲಾವಿದೆ ಸಂಧ್ಯಾ ಮಹೇಶ್

(ಇ + ಅ)ಷ್ಟು = ಎಷ್ಟು? ಮೂಲ ಸಂಸ್ಕೃತವೋ ಕನ್ನಡವೋ?

ಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ
ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು ಎಂದಾದರೆ, [ಅ।ಇ।ಎ]ಷ್ಟು ಪದಗಳ ಹುಟ್ಟು ಹೇಗೆ? ಕಿಟ್ಟೆಲ್ ಕೋಶದಲ್ಲಿ ೧೨ನೆ  ಶತಮಾನದ ಶಬ್ದಮಣಿದರ್ಪಣ ಮತ್ತು ಬಸವಪುರಾಣಗಳನ್ನು ಉಲ್ಲೇಖಿಸಲಾಗಿದೆ.   ಆದರೆ, ಕವಿರಾಜ ಮಾರ್ಗ, ಪಂಪ, ಮತ್ತು ರನ್ನರಲ್ಲಿ ಈ ಪದಗಳ ಪ್ರಯೋಗ ನನಗೆ ಕಾಣಲಿಲ್ಲ. ಇದಕ್ಕೆ ಏನಾದರೂ  ಸುಲಭ ವಿವರಣೆ ಇದ್ದರೆ ನನಗೆ ಹೊಳೆಯುತ್ತಿಲ್ಲ. 

ಕನ್ನಡದ ಅಭಿವೃದ್ದಿಗೆ ತೊಡಕಾಗಿರುವ ಅಂಶಗಳು

ವರ್ಷ ೨೦೦೦ದಲ್ಲಿ ಹುಟ್ಟು ಹಾಕಿದ ಕನ್ನಡ ಕಲಿಯ ಅಭಿಯಾನ ಫಲಪ್ರದವಾಗಿ ಮುಂದುವರೆಯುತ್ತಿದೆ. ವಿದೇಶಗಳಲ್ಲಿ ಕನ್ನಡ ಶಾಲೆಗಳು ಹುಟ್ಟುತ್ತಿದ್ದು ಕನ್ನಡ ಕಲಿಕೆ ಹೆಚ್ಚುತ್ತಿರುವುದು ಸ್ವಾಗತಾರ್ಹ. ಇದರಲ್ಲಿ ಕೇವಲ ಕನ್ನಡ ಪ್ರೀತಿ ಅಭಿಮಾನಗಳಿಂದ, ಮಕ್ಕಳನ್ನು ಕನ್ನಡ ಸಂಸ್ಕೃತಿಯಲ್ಲಿ ಬೆಳೆಸುವ ಹಂಬಲದಿಂದ ತಮ್ಮನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತಿರುವ ತಂದೆ ತಾಯಂದಿರು ಸ್ತುತ್ಯಾರ್ಹರು. ಕನ್ನಡ ಕಾಯಕದ ಅಡಿಯಲ್ಲಿ, ಕರ್ನಾಟಕದಲ್ಲಿನ ಸರಕಾರಿ ಸಂಸ್ಥೆಗಳು ಮತ್ತು ಮಾಧ್ಯಮಗಳು ವಿದೇಶಗಳಲ್ಲಿನ ಕನ್ನಡದತ್ತ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾರೆ. ಆದರೆ ಕರ್ನಾಟಕದಲ್ಲೇ ಕನ್ನಡದ ಸ್ಥಿತಿ ಚಿಂತನೀಯವಾಗಿರುವಾಗ, ಇದು ಬೇರಿಗೆ ಹುಳ ಹತ್ತಿರುವಾಗ ಹೂಗಳನ್ನು ಅರಳಿಸುವ ಅಥವಾ ಕೆಳಗೆ ತೂಗಾಡುತ್ತಿರುವ ಹಣ್ಣುಗಳನ್ನು ಬಾಚಿಕೊಳ್ಳುವ ಯತ್ನ ಎನ್ನಿಸುವುದು ಸಹಜ. ಹಾಗಾಗದಿರಲು, ಕರ್ನಾಟಕದಲ್ಲಿ ಕನ್ನಡದ ಅಭಿವೃದ್ಧಿ ಏಕೆ ಕುಂಠಿತವಾಗಿದೆ, ಅದಕ್ಕೆ ತೊಡಕಾಗಿರುವ ಅಂಶಗಳು ಯಾವವು, ಇವುಗಳನ್ನು ತಿಳಿದುಕೊಂಡರೆ ಸರಿಯಾದ ಪರಿಹಾರಗಳನ್ನು ರೂಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಶ್ರೀಯುತ ವಿವೇಕ ಅವರ ಲೇಖನ ಕಣ್ಣು ತೆರೆಸುವಂತಿದೆ.

ಉಗಾದಿಯೂ ಯುಗಾದಿಯೆ?

ಯುಗಾದಿಯಿಂದ ಉಗಾದಿ ಬಂತೆ? ಉಗಾದಿಗೆ ಒಂದು ಸ್ವತಂತ್ರ ಹುಟ್ಟು ಇದೆಯೆ? ಭಾಷೆ ಬೆಳೆಯುವುದದಾದರೂ ಹೇಗೆ?
... ಸಾಯಂಕಾಲದ ಮಳೆ ಕಾಯ್ದ ರಸ್ತೆಯ ಮೇಲೆ ರಪರಪನೆ ಬಿದ್ದಾಗ, ಹೆಬೆ ಎದ್ದು, ದೂಳಿನ ಕಂಪನ್ನು ಮೂಗು ಹಿಗ್ಗಿಸುತ್ತ ಸವಿಯಲು  ಕಾಯದವರು ಯಾರಿದ್ದಾರೆ! ಆ ದಿನದ ಆಗಮನವನ್ನು ಸಾರುವುದೇ ಉಗಾದಿ!

ಭಾಷೆಯ ಕಲಿಕೆ

ಒಂದು ಹೊಸ ಭಾಷೆ ಕಲಿಯಲು ಅಥವಾ ಕಲಿಸಲು ಯಾವ ದಾರಿ ಉತ್ತಮ? ನಿಗದಿತವಾಗಿ ಪೂರ್ವಾಯೋಜಿತವಾದ 'ಪಾಠ'ಗಳ ಮೂಲಕ ವ್ಯವಸ್ಥಿತವಾಗಿ (organized, formal, step-by- step method) ಕಲಿಯು(ಸು)ವುದೋ? ಇಲ್ಲವೇ ಅನಿಶ್ಚಿತವಾಗಿ ಅಲ್ಲಲ್ಲಿ ಪ್ರಯೋಗದಲ್ಲಿ ಕಂಡುಬರುವ ಅಂಶಗಳನ್ನು ಬಂದಬಂದ ಹಾಗೆ ಅಳವಡಿಸಿಕೊಳ್ಳುತ್ತ ಕಲಿಯು(ಸು)ವುದು (random, ad-hoc method) ವಾಸಿಯೋ? ಯಾವ ವಿಧಾನ ಹೆಚ್ಚು  ಪರಿಣಾಮಕಾರಿ?

ಮುಖ್ಯವಾಹಿನಿಗೆ ಬರಲು ಮಹಿಳೆಗೆ ಇರುವ ಅಡತಡೆಗಳೇನು?

“ಅನಾದಿ ಕಾಲದಿಂದಲೂ ಮಹಿಳೆಯನ್ನು ದ್ವೀತಿಯ ದಜೆ೯ ನಾಗರಿಕರಂತೆ ನೋಡಲಾಗಿದೆ. ಆಧುನಿಕ ಯುಗದಲ್ಲಿ ಮಹಿಳೆಗೆ ಸಮಾನವಾದ ಸ್ಥಾನ ಮಾನ ನೀಡಿರುವೆವು ಎಂದು ನಾವು ಅಂದುಕೊಂಡರೂ ಇನ್ನೂ ನಮ್ಮ ಸಮಾಜದಲ್ಲಿ ಹೆಚ್ಚಿನ ಜನರು ಮಹಿಳೆಯನ್ನು ಗೌರವಯುತವಾಗಿ ನೋಡುತ್ತಿಲ್ಲ.“
ಇದರ ಹಿಂದಿರುವ ಕಾರಣಗಳೇನು? ತೊಡಕುಗಳೇನು? ವಿಶ್ವ ಮಹಿಳಾ ದಿನ ಒಂದು ಟೊಳ್ಳು ಆಚರಣೆಯಾಗದಿರಲಿ ಎಂಬ ಆಶಯದಿಂದ ಇವುಗಳನ್ನು ಒಂದೊಂದಾಗಿ ಗುರುತಿಸಿದ್ದಾರೆ ವಿವೇಕ ಬೆಟ್ಕುಳಿ.

ಆಸೆಯೇ ದುಃಖಕ್ಕೆ ಮೂಲವೇ?

ನನ್ನ ಮಗನಿಗೆ ೫ ವರುಷವಾಗಿದ್ದಾಗ ಒಂದು ಆಟಿಕೆಗಾಗಿ ಬೇಡಿಕೆಯಿಟ್ಟ. ಅದನ್ನು ನಾವು ಕೊಡಿಸಿದೆವು. ಮಾರನೇ ದಿನವಷ್ಟೇ ಅದೇ ಸರಣಿಯಲ್ಲಿಯ ಇನ್ನೊಂದು ಬೊಂಬೆ ಬೇಕೆಂದು ಹಠ ಶುರುವಾಯಿತು. ವಿಷಯ ಮರೆಸುವ ನನ್ನ ಯಾವುದೇ ಮಾಮೂಲಿನ ತಂತ್ರಗಳು ನಿಷ್ಪ್ರಯೋಜಕವಾಗಿ ಸಣ್ಣ ಅಳುಕ ಮುಂದುವರೆಯಿತು.

ಎಲ್ಲ ಆಸೆಗಳನ್ನು ಪೂರೈಸಬೇಕೇ? ಪೂರೈಸಿದಂತೆ ಆಸೆಯ ಬಳ್ಳಿ ಬೆಳೆಯುತ್ತಲೇ ಹೋಗುತ್ತದೆಯೇ? ಯಾರಿಗೆ ದುಃಖ? ಯಾರಿಗೆ ಕೋಪ? ಯಾರಿಗೆ ಮರುಕ? ಮಗುವಿನ ಮನಸ್ಸನ್ನು ನೋಯಿಸದೆ, ವಾದ-ಪ್ರತಿವಾದಗಳಿಗೆ ಎಡೆ ಕೊಡದೆ, ಜೀವನದ ಪಾಠಗಳನ್ನು ಕಲಿಸುವುದು ಹೇಗೆ? "ಸುಳ್ಳು" ತಂದೆ-ತಾಯಿಗಳಿಗೆ ಸಮರ್ಥ ಅಸ್ತ್ರವಾದಿತೇ? ಇಂದಿನ "ಬಿಳಿ ಸುಳ್ಳು" ನಾಳೆ ಬೆಳೆದು ಮುಳ್ಳು ಆದೀತೆ? ಈ ಪ್ರಶ್ನೆಗಳ ಮೇಲೆ ಅನುಭವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಶೃತಿ ಅರವಿಂದ್.