ಕನ್ನಡ ಕಲಿ ದಿನ

ಕನ್ನಡ ಕಲಿ ದಿನಾಚರಣೆ ಎಲ್ಲ ಕನ್ನಡ ಕಲಿ ಕ್ರಿಯಾಕೇಂದ್ರಗಳ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಮತ್ತು ಕನ್ನಡ ಜ್ಞಾನ, ಪ್ರತಿಭೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮ. ಶಿಕ್ಷಕರ ಮತ್ತು ಪಾಲಕರ ಸಮ್ಮಿಲನ; ಕನ್ನಡ ಕಲಿಸುವ ವಿಧಾನಗಳ ವಿಚಾರ ವಿನಿಮಯ; ಕನ್ನಡ ಮತ್ತು ಸಾಂಸ್ಕೃತಿಕ ಕಮ್ಮಟಗಳು, ಇತ್ಯಾದಿ. ಈ ಕಾರ್ಯಕ್ರಮವನ್ನು ೨೦೦೬ ರಿಂದ ನಡೆಸಲಾಗುತ್ತಿದೆ.

ಕನ್ನಡ ಕಲಿಗೆ ನಮನ: ಫ್ಯಾಮಿಲೀಸ್ ಫಾರ್‌ವಾರ್ಡ ೨೦೦೯

ಇಟ್ಟಕೊಂಡ ಉದ್ದೇಶ ಈಡೇರಿದರೆ ಸಂತಸ.  ಅಂದುಕೊಂಡಕ್ಕಿಂತ ಹೆಚ್ಚಿಗೆ ಸಾಧಿಸಿದರೆ ಎಲ್ಲರಿಗೂ ಹಿಗ್ಗು. ಈ ವರ್ಷ ಫ್ಯಾಮಿಲೀಸ್ ಫಾರ್‍ವಾರ್ಡ್‌ಗೆ ೫೦ ಬೆನ್ಚೀಲಗಳನ್ನು ಒದಗಿಸುವ ಗುರಿ ಇಟ್ಟುಕೊಂಡು ಬೇಸಿಗೆಯಲ್ಲಿ ಚಿರಾಗ ದಿಕ್ಷಿತ ಕಾರ್ಯಾಚರಣೆ ಪ್ರಾರಂಭಿಸಿದ . ಗುರಿ ಮೀರಿಸಿ ಬಂದ ಕನ್ನಡ ಕಲಿಗಳ ಸ್ಪಂದನೆ ಮಕ್ಕಳ ಮೊಗದಲ್ಲಿ ನಗು ಮೂಡಿಸುವುದರಲ್ಲಿ ಸಂಶಯವಿಲ್ಲ.  "ಕನ್ನಡ ಕಲಿಗಳು ಫ್ಯಾಮಿಲೀಸ್ ಫಾರ್‍ವಾರ್ಡ್‌ನ ಗೆಳೆಯರಾಗಿದ್ದುದು ನಮ್ಮ ಸೌಭಾಗ್ಯ" ಎನ್ನುತ್ತಾರೆ ಡೆಬಿ ರೆಗೇಲೆ.