ಕನ್ನಡ ಉಲಿ‍ ‍- ಕನ್ನಡ ಕಲಿ - ಕನ್ನಡ ನಲಿ

ಅನಂತಮೂರ್ತಿ, ಕಂಬಾರ ಸೇರಿದಂತೆ ಅನೇಕರ ಬಲು ಬಯಕೆಯೆಂದರೆ `ಅಮೆರಿಕಾದ ಕಂದಮ್ಮಗಳಿಗೆ ಕನ್ನಡ ಕಲಿಸಿ' ಎಂಬುದು. ಇಂಥಾ ಜರೂರತ್ತಿಗೆ ಸಣ್ಣದೊಂದು ಘಟನೆ ಕುಮ್ಮಕ್ಕು ಕೊಟ್ಟು , ಇವತ್ತು ೬ ಕನ್ನಡ ಕಲಿ ಶಾಲೆಗಳು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತಲೆಯೆತ್ತಿವೆ. ಇದು ಹಕೀಕತ್ತಾದ, ಸುಲಭವಲ್ಲದ ಹಾದಿಯ ಅನುಭವ ಲೇಖನವಿದು.

ಕನ್ನಡ ಕಲಿ: ಮುಂದುವರಿದ ಕೆಸಿಎ ಕನ್ನಡ ಡಿಂಡಿಮ ಮೊಳಗು

ಕನ್ನಡ ಕಲಿಕೆಯ ತರಗತಿಗಳು ಎಗ್ಗಿಲ್ಲದೆ ದಿಗ್ವಿಜಯ ಬಾರಿಸುತ್ತಿವೆ. ಇಂಗ್ಲೀಷು ವಾತಾವರಣದಲ್ಲಿ ನಮ್ಮ ಮಕ್ಕಳಿಗೆ ಕನ್ನಡದ ಅಕ್ಕರವನ್ನು ಪರಿಚಯಿಸುವ ಈ ಕಾರ್ಯಕ್ರಮ ಕನ್ನಡ ಸಂಸ್ಕೃತಿಯನ್ನು ಗಡಿಯಾಚೆಗೆ ಬಿತ್ತುವ ಬೆಳೆಸುವ ಯೋಜನೆಯೊಂದರ ಮೆಟ್ಟಿಲು.
 

ಸ್ಯಾನ್‌ ಫರ್ನಾಂಡೊ ವ್ಯಾಲಿಯಲ್ಲಿ ‘ಕನ್ನಡ ಸಂಕ್ರಮಣ’

ವಿಶ್ವೇಶ್ವರ ದೀಕ್ಷಿತರ ನೇತೃತ್ವದಲ್ಲಿ ಅಮೆರಿಕೆಯ ನೆಲದಲ್ಲಿ ಕನ್ನಡದ ಬೀಜಗಳನ್ನು ಊರುವ ‘ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ’ದ ಮಹತ್ವಾಕಾಂಕ್ಷಿ ಪ್ರಯತ್ನ ‘ಕನ್ನಡ ಕಲಿ’- ಈಗ ಸ್ಯಾನ್‌ ಫರ್ನಾಂಡೊ ವ್ಯಾಲಿ ಪ್ರದೇಶದಲ್ಲಿ ಚಿಗುರೊಡೆಯುತ್ತಿದೆ.