ಅವಿರತ ಅಪೂರ್ವ ಸಂಗತಿ

ಕನ್ನಡ ಕಲಿ  ಒಂದು ಅವಿರತ ಅಪೂರ್ವ ಸಂಗತಿ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೈಬೆರಳಿನಲ್ಲಿ ಎಣಿಸುವಷ್ಟು ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯ್ತು. ಕೂಡಲೆ , ೮೦ಕ್ಕೂ ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಕನ್ನಡ ಕಲಿಯ ಐದು ಅಧ್ಯಾಯಗಳು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹರಡಿಕೊಂಡವು.  ಈಗ ನಾವು ೧೬೦+ ಸದೃಢರಾಗಿದ್ದೇವೆ ಮತ್ತು ಇನ್ನು ಬೆಳೆಯುತ್ತಿದ್ದೇವೆ. ಕಳೆದ ವರ್ಷವೆ ಹೊಸ ಕನ್ನಡ ಕಲಿ ಶಾಲೆಯೊಂದು ಟಾರೆನ್ಸ್ ನಲ್ಲಿ ಪ್ರಾರಂಭವಾಯ್ತು.

ಕನ್ನಡ ಕಲಿ ದಿನ

ಕನ್ನಡ ಕಲಿ ದಿನಾಚರಣೆ ಎಲ್ಲ ಕನ್ನಡ ಕಲಿ ಕ್ರಿಯಾಕೇಂದ್ರಗಳ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಮತ್ತು ಕನ್ನಡ ಜ್ಞಾನ, ಪ್ರತಿಭೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮ. ಶಿಕ್ಷಕರ ಮತ್ತು ಪಾಲಕರ ಸಮ್ಮಿಲನ; ಕನ್ನಡ ಕಲಿಸುವ ವಿಧಾನಗಳ ವಿಚಾರ ವಿನಿಮಯ; ಕನ್ನಡ ಮತ್ತು ಸಾಂಸ್ಕೃತಿಕ ಕಮ್ಮಟಗಳು, ಇತ್ಯಾದಿ. ಈ ಕಾರ್ಯಕ್ರಮವನ್ನು ೨೦೦೬ ರಿಂದ ನಡೆಸಲಾಗುತ್ತಿದೆ.