ಪತ್ರ: ನಿಮ್ಮ ಖುಷಿ ನಮ್ಮ ಖುಷಿ!

ಬಹುತೇಕ ಎಲ್ಲಾ ಮಕ್ಕಳಿಗೂ ಅವರ ಮಾತೃ ಭಾಷೆ ಅರ್ಥವಾಗುತ್ತಾದ್ರೂ ಮಕ್ಕಳ ಉತ್ತರ ಮಾತ್ರ ಇಂಗ್ಲೀಷ್ ನಲ್ಲೆ. ಇದಕ್ಕೆ ಕಾರಣ ಅವವಯಸ್ಸಿನ ಮಕ್ಕಳೂ ಅದೇ ಭಾಷೆ ಮಾತನಾಡದಿರುವುದೇ?

ರೂಪಶ್ರೀ ಅವರ ಕನ್ನಡ ಕಲಿಕೆಯ ಬೆಳ‌ವಣಿಗೆಯನ್ನು ಪುಟ್ಟಿ ಪ್ರಪಂಚ ದಲ್ಲಿ ಕಾಣಬಹುದು


ನಮಸ್ಕಾರ ,

ಮೊದಲಿಗೆ ’ಕನ್ನಡ ಕಲಿ’ ಯಶಸ್ಸಿಗೆ ಅಭಿನಂದನೆಗಳು. ನನ್ನ ಎರಡೂವರೆ ವರ್ಷದ ಮಗಳಿಗೆ ಕನ್ನಡ ಹೇಳಿಕೊಡಲು ಗೂಗಲ್ ನಲ್ಲಿ ಕನ್ನಡ ಪಾಠಗಳನ್ನು ಹುಡುಕುವಾಗ ನಿಮ್ಮ ತಾಣ ಸಿಕ್ಕಿತು. ನೋಡಿ ಬಹಳ ಖುಶಿ ಆಯ್ತು.

ನಾನು ಶಾಲೆಯಲ್ಲಿ ಕನ್ನಡ ಕಲಿತದ್ದು ಮೂರನೆ ಭಾಷೆಯಾಗಿ ಅಲ್ಲದೆ english ಕಲಿಯಲು ಇರುವ ಆಕರ್ಷಕ ಮಾದ್ಯಮಗಳು (blocks, coloring pages, websites like starfall.com etc etc) ಕನ್ನಡದಲ್ಲಿ ನನಗೆ ತಿಳಿದ ಮಟ್ಟಿಗೆ ಸದ್ಯಕ್ಕೆ ಇಲ್ಲ . ಹಾಗಾಗಿ ಮಗಳಿಗೆ ಹೇಗೆ ಹೇಳಿಕೊಡಬೇಕು ಗೊತ್ತಿಲ್ಲ. ಸದ್ಯಕ್ಕಂತು ಮನೆಯಲ್ಲಿ ನಾವೆಲ್ಲ ಕನ್ನಡದಲ್ಲಿ ಮಾತಾಡುವುದರಿಂದ ಅವಳೂ ಕನ್ನಡದಲ್ಲೇ ಮಾತಾಡುತ್ತಿದ್ದಾಳೆ. ಆದ್ರೆ ಸ್ಕೂಲಿಗೆ ಹೋದ್ಮೇಲೆ ಇದನ್ನ ಮುಂದುವರೆಸೋದು ಹೇಗೆ?

ಇಲ್ಲಿನ ಸ್ನೇಹಿತರ ಬಹುತೇಕ ಎಲ್ಲಾ ಮಕ್ಕಳಿಗೂ ಅವರ ಮಾತೃ ಭಾಷೆ ಅರ್ಥವಾಗುತ್ತಾದ್ರೂ ಮಕ್ಕಳ ಉತ್ತರ ಮಾತ್ರ ಇಂಗ್ಲೀಷ್ ನಲ್ಲೆ. ಇದಕ್ಕೆ ಕಾರಣ ಅವರ ವಯಸ್ಸಿನ ಮಕ್ಕಳೂ ಅದೇ ಭಾಷೆ ಮಾತನಾಡದಿರುವುದೇ?

ನನ್ನ ಮಗಳ ವಯಸ್ಸಿನ ಮಕ್ಕಳು / ಅವಳ ಸ್ನೇಹಿತರೂ ಕನ್ನಡ ಮಾತಾಡಿದ್ರೆ ಕಲಿಯಲು ಸುಲಭ/ ಅವಳಿಗೂ ಆಸಕ್ತಿ ಇರುತ್ತೆ ಅಂತ ನನ್ನ ಅನಿಸಿಕೆ. ಅದಕ್ಕೆ ವಾರಕ್ಕೊಮ್ಮೆ ನಮ್ಮ ಮನೆಯಲ್ಲೇ ಕನ್ನಡ ಪಾಠ ಶುರು ಮಾಡುವ ಯೋಚನೆಇದೆ, ಆದ್ರೆ ಹೇಗೆ ಮಾಡಬೇಕು ತಿಳಿಯುತ್ತಿಲ್ಲ.ನಿಮ್ಮ

ಪಠ್ಯಕ್ರಮವನ್ನು / ನಿಮ್ಮ ಪಾಠಗಳು ನಮಗೆ ಕೊಡಲು ಸಾದ್ಯವಾ? ನಿಮ್ಮಲ್ಲಿ ನೊಂದಾಯಿಸಿಕೊಳ್ಳುವುದು ಹೇಗೆ ತಿಳಿಸಿ.

ಅಂದಹಾಗೆ ನಾವೀಗ ಇರುವುದು ಫ್ಲೋರಿಡಾದ ತಲಹಸಿ ಯಲ್ಲಿ.

ವಂದನೆಗಳೊಂದಿಗೆ,

ರೂಪಶ್ರೀ


ರೂಪಶ್ರೀ, ನಮೋ!

ನಿಮ್ಮ ಖುಷಿ ನಮ್ಮ ಖುಷಿ!

ಭಾಷೆ ಕಲಿಸ/ಯಲು ತಕ್ಕ ವಾತಾವರಣ ಅವಶ್ಯ. ಕನ್ನಡ ಮಾತಾಡುವವರ ಮಧ್ಯೆ ಇದ್ದರೆ, ಕನ್ನಡ ಕಿವಿಯ ಮೇಲೆ ಸದಾ ಬಿಳುತ್ತಿದ್ದರೆ ಅದು ತಾನಾಗೆ ಬರುತ್ತದೆ. ಈ ದಿಶೆಯಲ್ಲಿ, ಮನೆಯಲ್ಲಿ ಕನ್ನಡ ಮಾತಾಡುತ್ತ ಸರಿಯಾದುದನ್ನೆ ಮಾಡುತ್ತಿದ್ದೀರಿ. ಮಕ್ಕಳು ಇಲ್ಲಿ ಶಾಲೆಗೆ ಹೋಗುವ ವರೆಗೆ ಯಾವ ಸಂಕೋಚವೂ ಇಲ್ಲದೆ ಸ್ಪಷ್ಟವಾಗಿ ನಿಮ್ಮಡನೆ ಕನ್ನಡದಲ್ಲೆ ಮಾತಾಡುತ್ತಾರೆ. ಶಾಲೆಯ ವಾತಾವರಣದಲ್ಲಿ ತಾವೊಬ್ಬರೆ ಕನ್ನಡ ಮಾತಾಡುವುದನ್ನು ಕಂಡು ಕನ್ನಡ ಮಾತಾಡಲು ಹಿಂದೇಟು ಹೊಡೆಯುತ್ತಾರೆ. ನೀವು ಕನ್ನಡದಲ್ಲಿ ಪ್ರಶ್ನಿಸಿದರೂ ಉತ್ತರ ಇಂಗ್ಲೀಷಿನಲ್ಲೆ ಹೊರಬರುತ್ತದೆ. ಇದಕ್ಕೆ ಧೈರ್ಯಗುಂದದೆ ಮನೆಯಲ್ಲಿ ಕನ್ನಡ ಮಾತಾಡುವದನ್ನು ಮುಂದುವರೆಸಬೇಕು. ಸಮಾಧಾನದಿಂದ ತಿದ್ದುತ್ತ, ಅವರು ಹೇಳಿದ್ದನ್ನೆ  ಕನ್ನಡದಲ್ಲಿ ಹೇಳಿ, ಮಕ್ಕಳಿಂದ ಹೇಳಿಸಬೇಕು. ಕನ್ನಡ ಮಾತಾಡುವದು fun ಅನಿಸಬೇಕು; ಹೋರಾಟ ಬೇಡ. ಬೇರೆ ಕನ್ನಡ ಮಕ್ಕಳೊಡನೆ ಬೆರೆಯಬೇಕು. ಕನ್ನಡ ಕಲಿ ಈ ನಿಟ್ಟಿನಲ್ಲಿ ಬಹಳ ಅವಶ್ಯ. ಬೇರೆ ಕನ್ನಡ ಮಕ್ಕಳು ಕನ್ನಡ ಮಾತಾಡುವದನ್ನು ನೋಡಿ, ಅದು 'ಅಸಹಜ' ಎಂಬ ಭಾವನೆ ಬಾರದು. ನಿಮ್ಮ ಅನಿಸಿಕೆ ಸರಿಯಾಗಿದೆ.

ಕನ್ನಡ ಕಲಿ ಪ್ರಾರಂಬಿಸಲು ನಮ್ಮ ಸಂಪೂರ್ಣ ಬೆಂಬಲ ಇದೆ. ಈ ವಯಸ್ಸಿನಲ್ಲಿ  ಮಾತಿನ ಮೇಲೆ ಒತ್ತು ಕೊಡಿ. ಕತೆ, ಕವನ, ಕನ್ನಡದಲ್ಲಿ ಆಟ ಆಡಿಸಿವುದು, ಚಿತ್ರಗಳನ್ನು ನೋಡಿ ಹೆಸರಿಸುವುದು/ಕತೆ ಕಟ್ಟುವುದು ಇತ್ಯಾದಿ ಮಾಡಬಹುದು. ಮಕ್ಕಳ ಬಣ್ಣಬಣ್ಣದ ಇಂಗ್ಲೀಷ್ ಕತೆ ಪುಸ್ತಕಗಳನ್ನೆ ಅವರಿಗೆ ತೋರಿಸುತ್ತ (ತತ್ಕ್ಷಣ ಅನುವಾದಿಸುತ್ತ) ಕನ್ನಡದಲ್ಲಿ ಓದಿ. ಬೇಸಿಗೆಯಲ್ಲಿ, ಹೈಕಿಂಗು, ಪಾರ್ಕು, ಬೀಚು, ಮ್ಯೂಸಿಯಂಗಳಿಗೆ ಕನ್ನಡ ಕಲಿ ಮಕ್ಕಳನ್ನು ಸೇರಿಸಿ ಕರೆದೊಯ್ಯುವುದು; ಇವೆಲ್ಲವನ್ನು ಕನ್ನಡ ಚಟುವಟಿಕೆಗಳನ್ನಾಗಿ ಪರಿವರ್ತಿಸಿ ಕನ್ನಡ ಕಲಿಯಲು ವಾತಾವರಣ ಮತ್ತ್ತು ಅವಕಾಶ ಕಲ್ಪಿಸಿಕೊಳ್ಳಬೇಕು.  ಕನ್ನಡ ಕಲಿ ಪ್ರಾರಂಭಿಸಲು ಬೇರೆ ಮಕ್ಕಳನ್ನೂ ಸೇರಿಸುವುದು ಅವಶ್ಯ.

ಸದ್ಯಕ್ಕೆ ನಿಮಗೆ ಪಠ್ಯಪುಸ್ತಕಗಳ ಅವಶ್ಯಕತೆ ಇಲ್ಲ. ಯಾವ ಮುಹೂರ್ತಕ್ಕೂ ಕಾಯದೆ, ನಿಮ್ಮ ಸ್ನೇಹಿತರನ್ನು ಅಹ್ವಾನಿಸಿ, ಇಂದೆ ಪ್ರಾರಂಭಿಸಿ.

ಕನ್ನಡಕಲಿಗಳ ಕೆಲವು ಉಪಯುಕ್ತ‌ ಪ್ರಶ್ನೋತ್ತರಗಳನ್ನು ಅಂಟಿಸಿದ್ದೇನೆ.

ಕನ್ನಡ ಕಲಿಗಳೆ,  ನಿಮ್ಮ ಕಮೆಂಟುಗಳೇನು?

ವಿಶ್ವೇಶ್ವರ

Permalink

ಆರುಶ್ರಿಗೆ (ನಮ್ಮ ಮಗಳು) ಕನ್ನಡ ಮೊದಲಿಂದ ಬಂದರು ಕೂಡ ಕನ್ನಡ ಕಲಿಗೆ ಸೇರಿದ ಮೇಲೆ ಬೇರೆ ಮಕ್ಕಳು ಕನ್ನಡ ಮಾತಾಡುವುದು ನೋಡಿ ಅವಳಿಗೆ ಇದು ಅವಳೊಬ್ಬಳೆ ಮಾತನಾಡುವ ಬಾಷೆ ಅಲ್ಲ ಬೇರೆ ಮಕ್ಕಳು ಇಲ್ಲಿ (ಅಮೆರಿಕ) ಮಾತನಾಡುವರು ಎನ್ದು ಅರಿವಾಗಿದೆ. ಈಗ ಕನ್ನಡ ಮಾತಾಡುವುದು ಅಥವ ಬರೆಯುವ ಪ್ರಯತ್ನಕ್ಕೆ ನಾವ fight ಮಾಡಬೇಕಿಲ್ಲ.

ಕನ್ನಡ ಕಲಿಗೆ ದನ್ಯವಾದಗಳು. ಭಾಷೆ ನಮ್ಮ ಸಂಸ್ಕೃತಿಗೆ ಬಾಗಿಲು. ಹಾಗಾಗಿ ಕನ್ನಡ ಕಲಿ ಭಾಷೆ ಮತ್ತು ಸಂಸ್ಕೃತಿ ಎರಡನ್ನೂ ಕಲಿಸುತ್ತಿದೆ ಎಂದರೆ ತಪ್ಪಲ್ಲ.

ಗಿರೀಶ್

Add new comment

Plain

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type='1 A I'> <li> <dl> <dt> <dd> <h2 id='jump-*'> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.

Theme by Danetsoft and Danang Probo Sayekti inspired by Maksimer