ಹೊಯ್ಸಳ ಬಾಲವನ
ಡುಮಿಂಗ : ಒಂದು ಅನಿಸಿಕೆ
ಮೊತ್ತ ಮೊದಲು ಕುತೂಹಲ ಕೆರಳಿಸುವುದು ಡುಮಿಂಗ ಅನ್ನುವ ಹೆಸರು. ಇಂಗ್ಲಿಷಿನಲ್ಲಿ Dummy, Idiot ಅಂತ ಅರ್ಥಗಳಿವೆ. ಕನ್ನಡದಲ್ಲಿ ಡುಮ್ಮ, ಡುಮ್ಮಣ್ಣ, ಡುಮ್ಮಿ, ಡುಮ್ಮಕ್ಕ ಅಂತ ಮುದ್ದಿನಿಂದ ಮಕ್ಕಳಿಗೆ ಕರೆಯುವ ವಾಡಿಕೆಯೂ ಇದೆ.
ಒನ್ನುಡಿ ರಾಮಾಯಣ
ಒನ್ನುಡಿ ರಾಮಾಯಣ
ಇಂದು ಕೋರೋನ ವೈರಾಣು ನಮ್ಮೆಲ್ಲರನ್ನೂ ನಮ್ಮ ನಮ್ಮ ಮನೆಯಲ್ಲೇ ಸೆರೆ ಹಿಡಿದಿದೆ. ಒಂದಲ್ಲ ಹತ್ತು ತಲೆ ಎತ್ತಿ (ಸ್ಟ್ರೇನ್ ಗಳು) ದೇಶ ದೇಶಗಳಲ್ಲಿ ಹರಿದಾಡುತ್ತಿದೆ.
ನಾನೇಕೆ ಉಗಾದಿಯ ಶುಭಾಶಯ ಹೇಳುವುದಿಲ್ಲ!
ನಸು ಬಿನದ ಬರಹ (ಬಿತ್ತರಿಕೆ)
ಈ ದಿನ, ಮೃಷ್ಟಾನ್ನ ಭೋಜನ ಮಾಡಿ, ಸೊಂಪಾಗಿ ತಾಂಬೂಲ ಜಗಿದು, ಎಲ್ಲರಿಗೂ ಉಗಿದುಗಿದು, ನಿಮ್ಮ ಬಾಯಲ್ಲಿ ತಯಾರಾದ, ಶುಭಾಶಯದ ಗಿರ್ಮಿಟ್ಟನ್ನು ಯಥೇಚ್ಛವಾಗಿ ಥೂಂತುರಿಸಲು ಯಾರ ಪರ್ಮಿಟ್ಟೂ ಬೇಕಿಲ್ಲ.
ಪವಿತ್ರ ಪ್ರೇಮ ಕವನ
ಸುಂದರ ಹೃದಯಂಗಮ ಕಾವ್ಯಗಳನ್ನು ಸೃಷ್ಟಿಸುವಲ್ಲಿ ಸಂಸ್ಕೃತ ಕವಿಗಳು ಎಷ್ಟು ನಿಷ್ಣಾತರೋ ಅವರು ಪದ್ಯ ಪದ ಅಕ್ಷರಗಳೊಂದಿಗೆ ಚೆಲ್ಲಾಟ ಆಡುವಲ್ಲಿಯೂ ಅಷ್ಟೇ ಚತುರರು.
ಕನ್ನಡದ ಗುಟ್ಟು : ಅಲ್ಲ- ಇಲ್ಲ
ಕನ್ನಡ ಸೂತ್ರ: ಇಲ್ಲವೆಂಬುದು ಅಭಾವ Λ ; ಅಲ್ಲವೆಂಬುದು ಅಸಮಾನ ≢
ಬೆನಕ ನಮನ
ಗಣೇಶ, ಡೊಂಕು ಕೊಂಬಿನ, ಡೊಳ್ಳು ಹೊಟ್ಟೆಯ, ದೊಡ್ಡ ಮೈಯ, ಒಂದೆ ಕೋರೆಯ, ಇಲಿ ವಾಹನದ, ಬೆನಕ, ಎಲ್ಲರಿಗೂ ಆಯಸ್ಸು ಆರೋಗ್ಯಗಳನ್ನು ನೀಡು; ಸದ್ಬುದ್ಧಿಯನ್ನು ಕೊಡು; ಅವರ ಪ್ರಯತ್ನಗಳಿಗೆ ಬರುವ ಎಡರುಗಳನ್ನು ಅಳಿಸು;
ಯಶಸ್ಸು ಅವರದಾಗಲಿ. ಎಲ್ಲ ಜನ ಜೀವಿ, ಜೀವ ಜಂತು, ಜೀವಾತ್ಮರುಗಳಿಗೆ ಶಾಂತಿ ಸುಖ ದೊರಕಲಿ. ಎಲ್ಲರಿಗೂ ಒಳ್ಳೆಯದಾಗಲಿ;
ಮಾನವ್ಯ ಬೆಳೆಯಲಿ; ಮಾನವೀಯತೆ ಬೆಳಗಲಿ!
ಈಗ ಶ್ರೀ ಶಂಕರ ಭಗವತ್ಪಾದರ ಮಾತಿನಲ್ಲಿ[*] ಬೆನಕನಿಗೆ ನಮಿಸೋಣ
ಆಲಿಸಿ ...
ಅವಿರತ ಅಪೂರ್ವ ಸಂಗತಿ
ಕನ್ನಡ ಕಲಿ ಒಂದು ಅವಿರತ ಅಪೂರ್ವ ಸಂಗತಿ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೈಬೆರಳಿನಲ್ಲಿ ಎಣಿಸುವಷ್ಟು ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯ್ತು. ಕೂಡಲೆ , ೮೦ಕ್ಕೂ ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಕನ್ನಡ ಕಲಿಯ ಐದು ಅಧ್ಯಾಯಗಳು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹರಡಿಕೊಂಡವು. ಈಗ ನಾವು ೨೨೦+ ಸದೃಢರಾಗಿದ್ದೇವೆ ಮತ್ತು ಇನ್ನು ಬೆಳೆಯುತ್ತಿದ್ದೇವೆ. ಕಳೆದ ವರ್ಷವೆ ಹೊಸ ಕನ್ನಡ ಕಲಿ ಶಾಲೆಯೊಂದು ಟಾರೆನ್ಸ್ ನಲ್ಲಿ ಪ್ರಾರಂಭವಾಯ್ತು.